ʼಡಬಲ್ ಗಣಿತ ಕ್ಲಾಸ್ ಕೇಳಿದಂತಾಯಿತುʼ: ಸಂಸತ್ತಿನಲ್ಲಿ ಮೋದಿಯ 110 ನಿಮಿಷಗಳ ಭಾಷಣಕ್ಕೆ ಪ್ರಿಯಾಂಕ ಗಾಂಧಿ ಪ್ರತಿಕ್ರಿಯೆ
ಪ್ರಿಯಾಂಕಾ ಗಾಂಧಿ ವಾದ್ರಾ (Photo: PTI)
ಹೊಸದಿಲ್ಲಿ: ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 110 ನಿಮಿಷಗಳ ಭಾಷಣವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ʼಬೋರಿಂಗ್ʼ ಎಂದು ಹೇಳಿದ್ದು, ʼಶಾಲೆಯಲ್ಲಿ ಡಬಲ್ ಗಣಿತ ಕ್ಲಾಸ್ ಕೇಳಿದಂತಾಯಿತುʼ ಎಂದು ಟೀಕಿಸಿದ್ದಾರೆ.
ಪ್ರಧಾನಿ ಮೋದಿಯವರ 11 ನಿರ್ಣಯಗಳು "ಟೊಳ್ಳು" ಎಂದು ಬಣ್ಣಿಸಿದ ಪ್ರಿಯಾಂಕ ಗಾಂಧಿ, ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಇದ್ದಿದ್ದರೆ ಅದಾನಿ ವಿಷಯದ ಬಗ್ಗೆ ಚರ್ಚೆಗೆ ಬಿಜೆಪಿ ಏಕೆ ಒಪ್ಪುವುದಿಲ್ಲ ಎಂದು ಕೇಳಿದ್ದಾರೆ.
ಪ್ರಧಾನಿ ಯಾವುದೇ ಹೊಸ ವಿಚಾರದ ಬಗ್ಗೆ ಮಾತನಾಡಿಲ್ಲ. ನಮಗೆ ಬೋರಿಂಗ್ ಅನಿಸಿತು. ಇದು ನನ್ನನ್ನು ದಶಕಗಳ ಹಿಂದಕ್ಕೆ ಕೊಂಡೊಯ್ದಿದೆ. ʼಗಣಿತದ ಡಬಲ್ ಕ್ಲಾಸ್ ನಲ್ಲಿ ಕುಳಿತಿದ್ದೇನೆʼ ಎಂದು ನನಗೆ ಅನಿಸಿತು ಎಂದು ಹೇಳಿದ್ದಾರೆ.
ಜೆಪಿ ನಡ್ಡಾ ಅವರು ಕೂಡ ಕೈಗಳನ್ನು ಉಜ್ಜುತ್ತಿದ್ದರು, ಆದರೆ ಮೋದಿ ಜಿ ಅವರನ್ನು ನೋಡಿದ ತಕ್ಷಣ, ಅವರು ಗಮನವಿಟ್ಟು ಕೇಳುತ್ತಿರುವಂತೆ ವರ್ತಿಸಲು ಪ್ರಾರಂಭಿಸಿದರು. ಅಮಿತ್ ಶಾ ಕೂಡ ತಲೆಯ ಮೇಲೆ ಕೈ ಹಾಕಿದ್ದರು, ಪಿಯೂಷ್ ಗೋಯಲ್ ಅವರು ನಿದ್ರೆ ತೂಕಾಡುತ್ತಿದ್ದರು. ಇದು ನನಗೆ ಹೊಸ ಅನುಭವವಾಗಿತ್ತು, ಪ್ರಧಾನಿ ಏನಾದರೂ ಹೊಸದನ್ನು ಹೇಳುತ್ತಾರೆ ಎಂದು ನಾನು ಭಾವಿಸಿದ್ದೆ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.