ಪಂಜಾಬ್: ಇಬ್ಬರು ಶಂಕಿತ ಉಗ್ರರ ಬಂಧನ
ಅಮೃತಸರ: ಲಷ್ಕರೆ ತಯ್ಯಿಬಾ (ಎಲ್ಇಟಿ)ದ ಭಯೋತ್ಪಾದಕ ಗುಂಪೊಂದನ್ನು ಇಲ್ಲಿ ಭೇದಿಸಲಾಗಿದ್ದು, ಜಮ್ಮು ಹಾಗೂ ಕಾಶ್ಮೀರದ ಇಬ್ಬರು ನಿವಾಸಿಗಳನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಘಟನಾ ಸ್ಥಳದಿಂದ 2 ಐಇಡಿ, 2 ಹ್ಯಾಂಡ್ ಗ್ರೆನೇಡ್, 1 ಪಿಸ್ತೂಲ್, 2 ಮ್ಯಾಗಝಿನ್, 24 ಕಾಟ್ರಿಜ್, 1 ಟೈಮರ್ ಸ್ವಿಚ್, 8 ಡಿಟೋನೇಟರ್ ಹಾಗೂ 4 ಬ್ಯಾಟರಿಗಳನ್ನು ತನಿಖಾ ತಂಡ ಪತ್ತೆ ಹಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂಜಾಬ್ ಪೊಲೀಸ್ ನ ರಾಜ್ಯ ವಿಶೇಷ ಕಾರ್ಯಾಚರಣೆ ಘಟಕ-ಅಮೃತಸರ ತಂಡ ಹಾಗೂ ಕೇಂದ್ರ ಸಂಸ್ಥೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿತ್ತು.
Next Story