ಜನರ ಆಕ್ರೋಶಕ್ಕೆ ಗುರಿಯಾಗಿರುವ ಪಂಜಾಬಿ ಗಾಯಕ ಶುಭ್
ಪ್ರತ್ಯೇಕತಾವಾದಿ ಖಾಲಿಸ್ತಾನಿಗಳಿಗೆ ಬೆಂಬಲ ಆರೋಪ
Shubh | Photo: X \ @Shubhworldwide
ಮುಂಬೈ: ಭಾರತ ಮತ್ತು ಕೆನಡ ನಡುವೆ ರಾಜತಾಂತ್ರಿಕರನ್ನು ಉಚ್ಚಾಟಿಸುವ ಸಮರ ಆರಂಭವಾಗಿರುವಂತೆಯೇ, ಕೆನಡದಲ್ಲಿರುವ ಪಂಜಾಬಿ ಗಾಯಕ ‘ಶುಭ್’ ಎಂಬ ಹೆಸರಿನಿಂದ ಜನಪ್ರಿಯರಾಗಿರುವ ಶುಭ್ನೀತ್ ಸಿಂಗ್ ಜನರ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅವರ ಸಂಗೀತ ಕಚೇರಿ ಮುಂಬೈನಲ್ಲಿ ಸೆಪ್ಟಂಬರ್ 23ರಿಂದ 25ರವರೆಗೆ ನಡೆಯಲಿದೆ.
ಶುಭ್ನೀತ್ ಸಿಂಗ್ ಪ್ರತ್ಯೇಕತಾವಾದಿ ಖಾಲಿಸ್ತಾನಿ ಶಕ್ತಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಭಾರತೀಯ ಜನತಾ ಯುವ ಮೋರ್ಚ (ಬಿಜೆವೈಎಮ್) ಹಲವು ಸದಸ್ಯರು ಆರೋಪಿಸಿದ್ದಾರೆ.
ಮುಂಬೈ ಸಂಗೀತ ಕಚೇರಿಯಲ್ಲದೆ, ಶುಭ್ ಮೂರು ತಿಂಗಳ ಅವಧಿಯ ಭಾರತ ಪ್ರವಾಸದಲ್ಲಿರುತ್ತಾರೆ. ಈ ಅವಧಿಯಲ್ಲಿ ಅವರು ಹೊಸದಿಲ್ಲಿ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಪ್ರದರ್ಶನ ನೀಡಲಿದ್ದಾರೆ. ಬಿಜೆವೈಎಮ್ ಸದಸ್ಯರು ಇತ್ತೀಚೆಗೆ ಶುಭ್ ಅವರ ಪೋಸ್ಟರ್ ಗಳನ್ನು ಹರಿದು ಹಾಕಿದ್ದಾರೆ.
ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರವಿಲ್ಲದ ಭಾರತದ ನಕಾಶೆಯೊಂದನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದು, ಅದೀಗ ವೈರಲ್ ಆಗಿದೆ.
ಶುಭ್ರ ಹಾಡುಗಳಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ತಾಳ ಹಾಕುತ್ತಿರುವ ಚಿತ್ರವೊಂದು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಆದರೆ, ಈಗ ಕೊಹ್ಲಿ, ಶುಭ್ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಕ್ರಿಕೆಟರ್ ಗಳಾದ ಕೆ.ಎಲ್. ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಅವರನ್ನು ಅನ್ ಫಾಲೋ ಮಾಡಿದ್ದಾರೆ ಎನ್ನಲಾಗಿದೆ.