ಸಹೋದರಿ ಪ್ರಿಯಾಂಕಾ ಸಂಸತ್ತಿಗೆ ಪ್ರವೇಶಿಸುವ ಪೋಟೋ ಸೆರೆ ಹಿಡಿದ ರಾಹುಲ್ ಗಾಂಧಿ
ಪ್ರಿಯಾಂಕಾ ಗಾಂಧಿ , ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ವಯನಾಡ್ ಲೋಕಸಭಾ ಕ್ಷೇತ್ರದ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಸಂಸತ್ತಿಗೆ ಸಹೋದರಿ ಪ್ರಿಯಾಂಕಾ ಗಾಂಧಿ ಆಗಮಿಸುತ್ತಿದ್ದಂತೆ ರಾಹುಲ್ ಗಾಂಧಿ ತಮ್ಮ ಮೊಬೈಲ್ ನಲ್ಲಿ ಪೋಟೋವನ್ನು ಸೆರೆ ಹಿಡಿದಿದ್ದಾರೆ.
ಈ ಕುರಿತು ಕಾಂಗ್ರೆಸ್ ʼಹೆಮ್ಮಯ ಸಹೋದರʼ ಎಂದು ಶೀರ್ಷಿಕೆಯಲ್ಲಿ ಎಕ್ಸ್ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ವೀಡಿಯೊದಲ್ಲಿ ಪ್ರಿಯಾಂಕಾ ಅವರು ಸಂಸತ್ತಿಗೆ ಪ್ರವೇಶಿಸುತ್ತಿದ್ದಂತೆ ಮುಂದೆ ಬಂದ ರಾಹುಲ್ ಗಾಂಧಿ ಮೊಬೈಲ್ ನಲ್ಲಿ ಪೋಟೋವನ್ನು ಸೆರೆ ಹಿಡಿಯುವುದು ಕಂಡು ಬಂದಿದೆ. ಈ ವೇಳೆ ಇತರ ಸಂಸದರು ಕೂಡ ಪ್ರಿಯಾಂಕ ಜೊತೆ ನಿಂತುಕೊಂಡಿದ್ದಾರೆ.
Proud Brother ❤️ pic.twitter.com/InNUypMxce
— Congress (@INCIndia) November 28, 2024
ಲೋಕಸಭೆ ಉಪಚುನಾವಣೆಯಲ್ಲಿ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದ ಪ್ರಿಯಾಂಕಾ ಗಾಂಧಿ ಗುರುವಾರ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಮಾತನಾಡಿದ ಪ್ರಿಯಾಂಕಾ ಗಾಂಧಿ, ನನಗೆ ತುಂಬಾ ಸಂತೋಷವಾಗಿದೆ. ವಯನಾಡಿನ ನನ್ನ ಸಹೋದ್ಯೋಗಿಗಳು ಇಂದು ನನ್ನ ಚುನಾವಣಾ ಪ್ರಮಾಣಪತ್ರವನ್ನು ತಂದಿದ್ದಾರೆ. ನನಗೆ ಇದು ಕೇವಲ ದಾಖಲೆಯಲ್ಲ, ಇದು ನಿಮ್ಮ ಪ್ರೀತಿ ಮತ್ತು ವಿಶ್ವಾಸದ ಸಂಕೇತವಾಗಿದೆ. ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ವಯನಾಡಿನ ಜನತೆಗೆ ಧನ್ಯವಾದಗಳು ಎಂದು ಹೇಳಿದ್ದಾರೆ.