ಊಮ್ಮನ್ ಚಾಂಡಿ ಸಾರ್ವಜನಿಕ ಸೇವಕ ಪ್ರಶಸ್ತಿಗೆ ರಾಹುಲ್ ಗಾಂಧಿ ಆಯ್ಕೆ
Photo : PTI
ತಿರುವನಂತಪುರ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕೇರಳದ ಮಾಜಿ ಮುಖ್ಯಮಂತ್ರಿ ದಿ.ಊಮ್ಮನ್ ಚಾಂಡಿ ಅವರ ಸ್ಮರಣಾರ್ಥ ಸ್ಥಾಪಿಸಲಾಗಿರುವ ಊಮ್ಮನ್ ಚಾಂಡಿ ಸಾರ್ವಜನಿಕ ಸೇವಕ ಪ್ರಶಸ್ತಿಗೆ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಆಯ್ಕೆಯಾಗಿದ್ದಾರೆ.
ದಿವಂಗತ ನಾಯಕನ ಮೊದಲ ಪುಣ್ಯತಿಥಿಯ ಮೂರು ದಿನಗಳ ಬಳಿಕ ರವಿವಾರ ಊಮ್ಮನ್ ಚಾಂಡಿ ಪ್ರತಿಷ್ಠಾನವು ಪ್ರಶಸ್ತಿಯನ್ನು ಪ್ರಕಟಿಸಿದೆ.
ಪ್ರಶಸ್ತಿಯು ಒಂದು ಲಕ್ಷ ರೂ.ನಗದು ಮತ್ತು ಖ್ಯಾತ ಕಲಾವಿದ ಹಾಗೂ ಚಿತ್ರ ನಿರ್ಮಾಪಕ ನೇಮಮ್ ಪುಷ್ಪರಾಜ್ ಅವರು ವಿನ್ಯಾಸಗೊಳಿಸಿರುವ ಶಿಲ್ಪಕೃತಿಯನ್ನು ಒಳಗೊಂಡಿದೆ.
ರಾಹುಲ್ ಗಾಂಧಿಯವರು ಭಾರತ ಜೋಡೊ ಯಾತ್ರೆಯನ್ನು ನಡೆಸುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರವನ್ನು ಕಂಡುಕೊಂಡ ರಾಷ್ಟ್ರೀಯ ನಾಯಕರಾಗಿದ್ದಾರೆ. ಸಂಸದ ಶಶಿ ತರೂರ್ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ ಎಂದು ಪ್ರತಿಷ್ಠಾನವು ಹೇಳಿಕೆಯಲ್ಲಿ ತಿಳಿಸಿದೆ.
Next Story