“ರಾಹುಲ್ ಗಾಂಧಿ ನಮ್ಮ ನಾಯಕ, ಅವರ ಯಾತ್ರೆಯಲ್ಲಿ ಪಾಲ್ಗೊಳ್ಳಿ”: ಕಮಲ್ ನಾಥ್ ಕರೆ
ರಾಹುಲ್ ಗಾಂಧಿ , ಕಮಲ್ ನಾಥ್ | Photo: PTI
ಭೋಪಾಲ್: ಕಮಲ್ ನಾಥ್ ಪಕ್ಷಾಂತರ ಮಾಡಿ, ಬಿಜೆಪಿಯನ್ನು ಸೇರ್ಪಡೆಯಾಗಲಿದ್ದಾರೆ ಎಂದು ಕೆಲ ದಿನಗಳಿಂದ ವದಂತಿಗಳು ಹರಿದಾಡುತ್ತಿರುವ ಬೆನ್ನಿಗೇ, ರಾಹುಲ್ ಗಾಂಧಿ ನಮ್ಮ ನಾಯಕರಾಗಿದ್ದು, ರಾಜ್ಯದಲ್ಲಿನ ಅವರ ಭಾರತ್ ಜೋಡೊ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳಿ ಎಂದು ಕಮಲ್ ನಾಥ್ ಜನರಿಗೆ ಕರೆ ನೀಡಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಮಲ್ ನಾಥ್, "ರಾಹುಲ್ ಗಾಂಧಿಯವರ ಭಾರತ್ ಜೋಡೊ ನ್ಯಾಯ ಯಾತ್ರೆಯನ್ನು ಸ್ವಾಗತಿಸಲು ಮಧ್ಯಪ್ರದೇಶದ ಜನರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರೋಮಾಂಚಿತರಾಗಿದ್ದಾರೆ. ನಮ್ಮ ನಾಯಕ ರಾಹುಲ್ ಗಾಂಧಿ ದೇಶಾದ್ಯಂತದ ಬೀದಿಗಳಲ್ಲಿ ಯಾತ್ರೆ ಕೈಗೊಂಡಿದ್ದು, ಅನ್ಯಾಯ, ದಬ್ಬಾಳಿಕೆ ಹಾಗೂ ದುರ್ಲಾಭದ ವಿರುದ್ಧ ನಿರ್ಣಾಯಕ ಹೋರಾಟ ನಡೆಸುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ.
"ಮಧ್ಯಪ್ರದೇಶದ ಜನರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಗರಿಷ್ಠ ಪ್ರಮಾಣದಲ್ಲಿ ಭಾರತ್ ಜೋಡೊ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ರಾಹುಲ್ ಗಾಂಧಿಯವರ ಶಕ್ತಿ ಮತ್ತು ಧೈರ್ಯವಾಗಬೇಕು ಎಂದು ನಾನು ಮನವಿ ಮಾಡುತ್ತೇನೆ. ನಾನು ಹಾಗೂ ನೀವು ಒಟ್ಟಾಗಿ ಅನ್ಯಾಯದ ವಿರುದ್ಧದ ಈ ಅದ್ಭುತ ಅಭಿಯಾನದಲ್ಲಿ ಭಾಗಿಯಾಗೋಣ" ಎಂದು ಅವರು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಕಮಲ್ ನಾಥ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿಗಳಿಂದ ಮಾಧ್ಯಮಗಳಲ್ಲಿ ತಲೆಬರಹದ ಸುದ್ದಿಯಾಗಿದ್ದರು.
मध्यप्रदेश की जनता और कांग्रेस के कार्यकर्ता राहुल गांधी जी की भारत जोड़ो न्याय यात्रा की अगवानी के लिए उत्साहित हैं।
— Kamal Nath (@OfficeOfKNath) February 23, 2024
अन्याय, अत्याचार और शोषण के खिलाफ हम सबके नेता श्री राहुल गांधी जी पूरे देश में सड़कों पर उतरकर एक निर्णायक लड़ाई का ऐलान कर चुके हैं।
मैं मध्यप्रदेश की जनता…