ಕೇದಾರನಾಥ ದೇವಳದ ಹೊರಗೆ ಸರತಿ ನಿಂತಿದ್ದ ಭಕ್ತರಿಗೆ ಚಹಾ ವಿತರಿಸಿದ ರಾಹುಲ್ ಗಾಂಧಿ; ವಿಡಿಯೋ ವೈರಲ್
Photo:X/@INCIndia
ಡೆಹ್ರಾಡೂನ್: ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ರವಿವಾರದಂದು ಉತ್ತರಾಖಂಡದಲ್ಲಿ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ವಾಪಸಾದ ನಂತರ ಅಲ್ಲಿ ಸರತಿಯಲ್ಲಿ ನಿಂತಿದ್ದ ತೀರ್ಥಯಾತ್ರಿಗಳಿಗೆ ಚಹಾ ವಿತರಿಸಿದರು.
ರವಿವಾರ ತಮ್ಮ ಮೂರು ದಿನಗಳ ಉತ್ತರಾಖಂಡ ಭೇಟಿ ಆರಂಭಿಸಿದ ರಾಹುಲ್ ಗಾಂಧಿ, ದೇವಸ್ಥಾನಕ್ಕೆ ಪ್ರವೇಶಕ್ಕಾಗಿ ಸರತಿ ನಿಂತಿದ್ದ ಭಕ್ತರಿಗೆ ಚಹಾ ನೀಡಿ ಚಾಯ್ ಸೇವಾ ಸಲ್ಲಿಸಿದರು.
ರಾಹುಲ್ ಗಾಂಧಿ ಅವರೇ ತಮಗೆ ಚಹಾ ನೀಡುತ್ತಿರುವುದನ್ನು ಕಂಡು ಅಚ್ಚರಿಗೊಂಡ ಭಕ್ತರು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿದರು. ರಾಹುಲ್ ಗಾಂಧಿ ಕೂಡ ಯಾರಿಗೂ ನಿರಾಸೆ ಮೂಡಿಸಲಿಲ್ಲ.
“ಸರ್ ನಿಮ್ಮನ್ನು ನಾವು ಟಿವಿಯಲ್ಲಿ ಮಾತ್ರ ನೋಡಿದ್ದೆವು. ಈಗ ನಿಜವಾಗಿಯೂ ನೋಡುತ್ತಿದ್ದೇವೆ., ನಿಮ್ಮೊಂದಿಗೆ ಸೆಲ್ಫಿ ತೆಗೆಯಲೇ?” ಎಂದು ಒಬ್ಬ ವ್ಯಕ್ತಿ ರಾಹುಲ್ ಅವರನ್ನು ಕೇಳಿಕೊಂಡರು.
ರಾಹುಲ್ ಕೇದಾರನಾಥ ದೇವಸ್ಥಾನದಲ್ಲಿ ಆರತಿಯಲ್ಲಿ ಪಾಲ್ಗೊಂಡರು. ನಂತರ ತಮ್ಮ ದೇವಳ ಭೇಟಿಯ ಚಿತ್ರಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
अपनी केदारनाथ यात्रा के दौरान श्रद्धालुओं के लिए चाय सेवा देते @RahulGandhi जी
— Congress (@INCIndia) November 5, 2023
केदारनाथ मंदिर, उत्तराखंड pic.twitter.com/CSpRlIKcsb