ಸಂಸತ್ತಿನಲ್ಲಿ ಮೋದಿ-ಅದಾನಿ ಚಿತ್ರವಿರುವ ಮುಖವಾಡ ಧರಿಸಿ ಕಾಂಗ್ರೆಸ್ ಸಂಸದರಿಂದ ವಿಭಿನ್ನ ಪ್ರತಿಭಟನೆ; ಫೋಟೋ ಕ್ಲಿಕ್ಕಿಸಿ ಪ್ರಶ್ನೆ ಕೇಳಿದ ರಾಹುಲ್ ಗಾಂಧಿ
Photo credit: indiatoday.in
ಹೊಸದಿಲ್ಲಿ : ಚಳಿಗಾಲದ ಅಧಿವೇಶನದ ನಡುವೆ ಸೋಮವಾರ ಸಂಸತ್ತಿನಲ್ಲಿ ವಿರೋಧ ಪಕ್ಷದ ಸಂಸದರು ವಿಭಿನ್ನವಾಗಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸಂಸದರಾದ ಮಾಣಿಕಂ ಟ್ಯಾಗೋರ್ ಮತ್ತು ಸಪ್ತಗಿರಿ ಶಂಕರ್ ಉಲಕ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೌತಮ್ ಅದಾನಿ ಅವರ ಚಿತ್ರವಿರುವ ಮುಖವಾಡಗಳನ್ನು ಧರಿಸಿದ್ದರು. ಈ ವೇಳೆ ರಾಹುಲ್ ಗಾಂಧಿ ಫೋಟೋ ಕ್ಲಿಕ್ಕಿಸಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾದಾಗಿನಿಂದ ಅದಾನಿ ವಿರುದ್ಧ ಯುಎಸ್ ನಲ್ಲಿ ಲಂಚದ ಆರೋಪದ ಬಗ್ಗೆ ಚರ್ಚೆ ಗೆ ಆಗ್ರಹಿಸಿ ಪ್ರತಿಪಕ್ಷಗಳ ನಾಯಕರು ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ʼಮೋದಿ ಮತ್ತು ಅದಾನಿʼಯ ಮುಖವಾಡಗಳನ್ನು ಧರಿಸಿದ್ದ ಟ್ಯಾಗೋರ್ ಮತ್ತು ಸಪ್ತಗಿರಿ ಶಂಕರ್ ಅವರ ಚಿತ್ರಗಳನ್ನು ಕ್ಲಿಕ್ಕಿಸಿ, ನಿಮ್ಮಿಬ್ಬರ(ಮೋದಿ-ಅದಾನಿ) ಸಂಬಂಧಗಳ ಬಗ್ಗೆ ಹೇಳಿ ಎಂದು ಕೇಳಿದ್ದಾರೆ, ಈ ವೇಳೆ ಅವರು "ಹಮ್ ದೋನೋ ಮಿಲ್ಕೆ ಸಬ್ ಕರೇಂಗೆʼ (ನಾವಿಬ್ಬರು ಒಟ್ಟಿಗೆ ಸೇರಿ ಎಲ್ಲವನ್ನೂ ಮಾಡುತ್ತೇವೆ) ನಾವು ಹಲವು ವರ್ಷಗಳಿಂದ ಸಂಬಂಧ ಹೊಂದಿದ್ದೇವೆ ಎಂದು ಹೇಳಿದ್ದಾರೆ.
ಅವರಿಂದಲೇ ಸಂಸತ್ ಕಲಾಪ ಏಕೆ ಸ್ಥಗಿತಗೊಂಡಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದಾಗ, ಸಂಸದರು, ಅವರು ಇಂದು ನಾಪತ್ತೆಯಾಗಿದ್ದಾರೆ, ಅಮಿತ್ ಭಾಯ್ ಇಂದು ಸದನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.
#WATCH | Delhi: Lok Sabha LoP Rahul Gandhi joined Opposition MPs in their protest over the Adani matter, at the Parliament premises.
— ANI (@ANI) December 9, 2024
MPs of TMC and SP are not participating in this protest. pic.twitter.com/Fk9E7YxF2m