ಫೆ. 26ರಿಂದ ಮಾ.1ರವರೆಗೆ ಭಾರತ್ ಜೋಡೊ ನ್ಯಾಯ ಯಾತ್ರೆಗೆ ವಿರಾಮ: ಕೇಂಬ್ರಿಡ್ಜ್ ವಿವಿಯಲ್ಲಿ ಉಪನ್ಯಾಸ ನೀಡಲಿರುವ ರಾಹುಲ್ ಗಾಂಧಿ
File Photo: PTI
ಹೊಸ ದಿಲ್ಲಿ: ತಾವು ವ್ಯಾಸಂಗ ಮಾಡಿದ ವಿಶ್ವವಿದ್ಯಾಲಯವಾದ ಕೇಂಬ್ರಿಡ್ಜ್ ವಿಶ್ವವುದ್ಯಾಲಯದಲ್ಲಿ ಎರಡು ಉಪನ್ಯಾಸ ಕಾರ್ಯಕ್ರಮ ಹಾಗೂ ಹೊಸದಿಲ್ಲಿಯಲ್ಲಿ ಮುಖ್ಯವಾದ ಸಭೆಗಳಿಗೆ ಹಾಜರಾಗಲು ರಾಹುಲ್ ಗಾಂಧಿಗೆ ಅನುವು ಮಾಡಿಕೊಡಲು ಭಾರತ್ ಜೋಡೊ ನ್ಯಾಯ ಯಾತ್ರೆಗೆ ಫೆಬ್ರವರಿ 26ರಿಂದ ಮಾರ್ಚ್ 1ರವರೆಗೆ ವಿರಾಮ ನೀಡಲಾಗಿದೆ ಎಂದು ಬುಧವಾರ ಕಾಂಗ್ರೆಸ್ ಪ್ರಕಟಿಸಿದೆ.
ಬುಧವಾರ ಕಾನ್ಪುರ ಹಂತದ ಭಾರತ್ ಜೋಡೊ ನ್ಯಾಯ ಯಾತ್ರೆ ಮುಕ್ತಾಯಗೊಂಡ ನಂತರ, ಫೆ. 22 ಮತ್ತು 23ರಂದು ಯಾತ್ರೆಗೆ ವಿರಾಮವಿರಲಿದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಕೂಡಾ ಪ್ರಕಟಿಸಿದ್ದಾರೆ.
ಫೆಬ್ರವರಿ 24ರ ಬೆಳಗ್ಗೆ ಭಾರತ್ ಜೋಡೊ ನ್ಯಾಯ ಯಾತ್ರೆ ಉತ್ತರ ಪ್ರದೇಶದ ಮೊರಾದಾಬಾದ್ನಿಂದ ಪುನಾರಂಭಗೊಳ್ಳಲಿದ್ದು, ಸಂಭಲ್, ಆಲಿಗಢ, ಹಥ್ರಾಸ್ ಹಾಗೂ ಆಗ್ರಾ ಜಿಲ್ಲೆಗಳ ಮೂಲಕ ಹಾದು ಹೋಗಲಿದೆ. ನಂತರ ರಾಜಸ್ಥಾನದ ಧೋಲ್ಪುರ್ಗೆ ತೆರಳಲಿದೆ ಎಂದು ಅವರು ಹೇಳಿದ್ದಾರೆ.
Next Story