ಮುಂದಿನ ವಾರ ಅಮೆರಿಕಕ್ಕೆ ರಾಹುಲ್ ಗಾಂಧಿ ಭೇಟಿ; ಬ್ರೌನ್ ವಿವಿ ವಿದ್ಯಾರ್ಥಿಗಳೊಂದಿಗೆ ಸಂವಾದ
ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಮುಂದಿನ ವಾರ ಅಮೆರಿಕಕ್ಕೆ ಭೇಟಿ ನೀಡಲಿದ್ದು, ಬ್ರೌನ್ ವಿವಿಯಲ್ಲಿ ಉಪನ್ಯಾಸವನ್ನು ನೀಡುವ ಜೊತೆಗೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಕಾಂಗ್ರೆಸ್ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಈ ಬಗ್ಗೆ ಮಾಹಿತಿ ನೀಡಿದ್ದು,ರಾಹುಲ್ ಎ.21 ಮತ್ತು 22ರಂದು ರೋಡ್ ಐಲ್ಯಾಂಡ್ನ ಬ್ರೌನ್ ವಿವಿಗೆ ಭೇಟಿ ನೀಡಲಿದ್ದಾರೆ.
ರೋಡ್ ಐಲ್ಯಾಂಡ್ಗೆ ತೆರಳುವ ಮುನ್ನ ರಾಹುಲ್ ಅನಿವಾಸಿ ಭಾರತೀಯ ಸಮುದಾಯದ ಸದಸ್ಯರನ್ನು ಮತ್ತು ಭಾರತೀಯ ಸಾಗರೋತ್ತರ ಕಾಂಗ್ರೆಸ್(ಐಒಸಿ)ನ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಭೇಟಿಯಾಗಲಿದ್ದಾರೆ ಎಂದು ಖೇರಾ ತಿಳಿಸಿದ್ದಾರೆ.
Next Story