ವಯನಾಡ್ ಪರಿಹಾರ ಕಾರ್ಯಕ್ಕೆ 1 ತಿಂಗಳ ವೇತನ ದೇಣಿಗೆ ನೀಡಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ | PTI
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರವಾಹ ಪೀಡಿತ ವಯನಾಡಿನಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಕ್ಕೆ ಒಂದು ತಿಂಗಳ ವೇತನವನ್ನು ದೇಣಿಗೆ ನೀಡುವುದಾಗಿ ಬುಧವಾರ ಘೋಷಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ವಯನಾಡಿನಲ್ಲಿರುವ ನಮ್ಮ ಸಹೋದರರು ಮತ್ತು ಸಹೋದರಿಯರು ವಿನಾಶಕಾರಿ ದುರಂತವನ್ನು ಸಹಿಸಿಕೊಂಡಿದ್ದಾರೆ ಮತ್ತು ಅವರು ಎದುರಿಸಿದ ಊಹಿಸಲಾಗದ ನಷ್ಟದಿಂದ ಚೇತರಿಸಿಕೊಳ್ಳಲು ಅವರಿಗೆ ನಮ್ಮ ಬೆಂಬಲದ ಅಗತ್ಯವಿದೆ. ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳಿಗೆ ಸಹಾಯ ಮಾಡಲು ನಾನು ನನ್ನ ತಿಂಗಳ ಸಂಬಳವನ್ನು ನೀಡಿದ್ದೇನೆ. ಎಲ್ಲಾ ಭಾರತೀಯರು ತಮ್ಮಿಂದಾಗುವಷ್ಟು ಸಹಾಯ ಮಾಡುವಂತೆ ನಾನು ಪ್ರಾಮಾಣಿಕವಾಗಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ವಯನಾಡ್ನ ಮುಂಡಕ್ಕೈ, ಚೂರಲ್ಮಲ ಪ್ರದೇಶದಲ್ಲಿ ಜುಲೈನಲ್ಲಿ ಸುರಿದ ಭಾರೀ ಮಳೆಗೆ ಭೂಕುಸಿತ ಸಂಭವಿಸಿತ್ತು. ಕೇರಳ ರಾಜ್ಯ ವಿಪತ್ತು ಎಂದು ಘೋಷಿಸಲ್ಪಟ್ಟ ಈ ಘೋರ ದುರಂತದಲ್ಲಿ 400ಕ್ಕೂ ಅಧಿಕ ಮಂದಿ ಬಲಿಯಾಗಿದ್ದರು. ಸಾವಿರಾರು ಮಂದಿ ನಿರಾಶ್ರಿತರಾಗಿದ್ದರು.