ರಾಜಸ್ಥಾನ: ದಲಿತ ಯುವತಿಯ ಹತ್ಯೆ; ಪ್ರಮುಖ ಆರೋಪಿಯ ಬಂಧನ
ಜೈಪುರ: ರಾಜಸ್ಥಾನದ ಕರೌಲಿಯಲ್ಲಿ ಹದಿನೆಂಟು ವರ್ಷದ ದಲಿತ ಯುವತಿಯನ್ನು ಅಪಹರಿಸಿ ಅತ್ಯಾಚಾರಗೈದು, ಹತ್ಯೆ ನಡೆಸಿದ ಪ್ರಕರಣದ ಪ್ರಧಾನ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ದಲಿತ ಯುವತಿಯನ್ನು ಅಪಹರಿಸಲಾಗಿದೆ ಎಂದು ಹೇಳಲಾಗಿತ್ತು.
ಅನಂತರ ಆಕೆಯ ಮೃತದೇಹ ಕರೌಲಿಯ ಬಾವಿಯಲ್ಲಿ ಗುರುವಾರ ಪತ್ತೆಯಾಗಿತ್ತು. ಮೃತದೇಹದಲ್ಲಿ ಗುಂಡಿನ ಹಾಗೂ ಆ್ಯಸಿಡ್ನಿಂದ ಸುಟ್ಟ ಗಾಯಗಳು ಕಂಡು ಬಂದಿತ್ತು. ಯುವತಿಯ ಸಾವು ಗುಂಡು ತಗುಲಿ ಉಂಟಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಹೇಳಿದೆ. ದಲಿತ ಯುವತಿಯ ಹತ್ಯೆಗೈದ ಪ್ರಕರಣದ ಪ್ರಧಾನ ಆರೋಪಿಯನ್ನು ಬಂಧಿಸಲಾಗಿದೆ.
ಆತನ ವಿಚಾರಣೆ ನಡೆಸಲಾಗುತ್ತಿದೆ ಎಂದು ಕರೌಲಿಯ ಪೊಲೀಸ್ ಅಧೀಕ್ಷಕರಾದ ಮಮತಾ ಗುಪ್ತಾ ಅವರು ಹೇಳಿದ್ದಾರೆ.
Next Story