ರಾಜಸ್ಥಾನ ಹೈಕೋರ್ಟ್ ಜಿಲ್ಲಾ ನ್ಯಾಯಾಧೀಶರ ನೇಮಕಕ್ಕೆ ಪರೀಕ್ಷೆ ನಡೆಸಿದರೂ ಸಿಗದ ಸೂಕ್ತ ಅಭ್ಯರ್ಥಿ!
ನ್ಯಾಯಾಧೀಶರ ಹುದ್ದೆಗೆ ಬಡ್ತಿ ನೀಡಲು ಯಾವುದೇ ಸೂಕ್ತ ಅಭ್ಯರ್ಥಿ ಕಂಡು ಬಂದಿಲ್ಲ ಎಂದ ಹೈಕೋರ್ಟ್

ಸಾಂದರ್ಭಿಕ ಚಿತ್ರ | PC : PTI
ಜೈಪುರ: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜಸ್ಥಾನ ಉಚ್ಚ ನ್ಯಾಯಾಲಯವು ಸೀಮಿತ ಸ್ಪರ್ಧಾತ್ಮಕ ಪರೀಕ್ಷೆ 2024ರಲ್ಲಿ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಬಡ್ತಿ ನೀಡಲು ಯಾವುದೇ ಸೂಕ್ತ ಅಭ್ಯರ್ಥಿ ಕಂಡು ಬಂದಿಲ್ಲ ಎಂದು ಅಧಿಕೃತವಾಗಿ ಘೋಷಿಸಿದೆ.
2025,ಮಾ.8 ಮತ್ತು 9ರಂದು ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು.
ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳ ಪೈಕಿ ಯಾರೂ ಸೀಮಿತ ಇಲಾಖಾ ಕೋಟಾದಡಿ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಬಡ್ತಿ ಪಡೆಯಲು ಅಗತ್ಯವಾದ ಮಾನದಂಡಗಳನ್ನು ಪೂರೈಸಿಲ್ಲ ಎಂದು ರಿಜಿಸ್ಟ್ರಾರ್(ಪರೀಕ್ಷೆಗಳು) ಸಹಿ ಹಾಕಿರುವ ಘೋಷಣೆಯು ತಿಳಿಸಿದೆ. 2024ನೇ ಸಾಲಿಗಾಗಿ ಮಾರ್ಚ್ 2025ರಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯು ಯಾವುದೇ ಯಶಸ್ವಿ ಅಭ್ಯರ್ಥಿಯಿಲ್ಲದೆ ಮುಕ್ತಾಯಗೊಂಡಿದೆ ಎಂದು ಅದು ಸ್ಪಷ್ಟಪಡಿಸಿದೆ.
Next Story