ರಾಷ್ಟ್ರಪತಿ ಭವನದ ಐತಿಹಾಸಿಕ ʼದರ್ಬಾರ್ ಹಾಲ್ʼ, ʼಅಶೋಕ ಹಾಲ್ʼ ಇನ್ನು ಮುಂದೆ ʼಗಣತಂತ್ರ ಮಂಡಪ್ʼ, ʼಅಶೋಕ ಮಂಡಪ್ʼ
Image Credit: rashtrapatibhavan.gov.in
ಹೊಸದಿಲ್ಲಿ: ರಾಷ್ಟ್ರಪತಿ ಭವನದ ಐತಿಹಾಸಿಕ ʼದರ್ಬಾರ್ ಹಾಲ್ʼ ಮತ್ತು ʼಅಶೋಕ ಹಾಲ್ʼ ಅನ್ನು ಇಂದು ಕ್ರಮವಾಗಿ ʼಗಣತಂತ್ರ ಮಂಡಪ್ʼ ಮತ್ತು ʼಅಶೋಕ್ ಮಂಡಪ್ʼ ಎಂದು ಮರುನಾಮಕರಣಗೊಳಿಸಲಾಗಿದೆ.
ಈ ಕುರಿತು ರಾಷ್ಟ್ರಪತಿಗಳ ಸೆಕ್ರಟೇರಿಯಟ್ ಹೇಳಿಕೆ ಬಿಡುಗಡೆಗೊಳಿಸಿ, “ರಾಷ್ಟ್ರಪತಿ ಭವನದ ವಾತಾವರಣವು ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಬಿಂಬಿಸುವಂತಾಗಲು ನಿರಂತರ ಪ್ರಯತ್ನ ಮಾಡಲಾಗುತ್ತಿದೆ, ಈ ಹಿನ್ನೆಲೆಯಲ್ಲಿ ದರ್ಬಾರ್ ಹಾಲ್ ಮತ್ತು ಅಶೊಕ್ ಹಾಲ್ ಅನ್ನು ʼಗಣತಂತ್ರ ಮಂಡಪ್ʼ ಮತ್ತು ʼಅಶೋಕ್ ಮಂಡಪ್ʼ ಎಂದು ಮರುನಾಮಕರಣಗೊಳಿಸಲಾಗಿದೆ. ದರ್ಬಾರ್ ಎಂಬ ಪದ ಭಾರತದ ಹಿಂದಿನ ಆಡಳಿತಗಾರರ ಮತ್ತು ಬ್ರಿಟಿಷರ ಸಭೆಗಳನ್ನು ಪ್ರತಿನಿಧಿಸುತ್ತದೆ. ಈಗ ಅವು ಅಪ್ರಸ್ತುತವಾಗಿವೆ, ಗಣತಂತ್ರ ಎಂಬ ಪದ ಭಾರತೀಯ ಸಮಾಜದಲ್ಲಿ ಆಳವಾಗಿ ಬಹಳ ಹಿಂದಿದಿನಿಂದಲೂ ಬೇರೂರಿದೆ, ಅದೇ ಸೂಕ್ತ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಅಶೋಕ ಹಾಲ್ ಬದಲು ಅಶೋಕ ಮಂಡಪ್ ಎಂದು ಮರುನಾಮಕರಣಗೊಳಿಸುವುದು ಆಂಗ್ಲೀಕರಣದ ಕುರುಹನ್ನು ತೆಗೆದುಹಾಕುತ್ತದೆ ಮತ್ತು ಅಶೋಕ ಪದದ ಜೊತೆ ಸಂಯೋಜಿತವಾಗಿರುವ ಪ್ರಮುಖ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ದರ್ಬಾರ್ ಹಾಲ್ನಲ್ಲಿ ಪ್ರಮುಖ ಸಮಾರಂಭಗಳು ಮತ್ತು ಪ್ರಶಸ್ತಿ ವಿತರಣಾ ಸಮಾರಂಭಗಳು ನಡೆಯುತ್ತವೆ. ಅಶೋಕ ಹಾಲ್, ಮೂಲತಃ ಒಂದು ಬಾಲ್ರೂಮ್ ಆಗಿತ್ತು.