2000 ರೂ. ಮುಖಬೆಲೆಯ ಶೇ. 98.18 ನೋಟುಗಳು ಮರಳಿವೆ: ಆರ್ಬಿಐ

ಸಾಂದರ್ಭಿಕ ಚಿತ್ರ | PC : NDTV
ಹೊಸದಿಲ್ಲಿ: 2000 ರೂ. ಮುಖಬೆಲೆಯ ನೋಟುಗಳಲ್ಲಿ ಶೇ. 98.18 ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ. ಕೇವಲ 6,471 ಕೋ.ರೂ. ಮೌಲ್ಯದ ನೋಟುಗಳು ಸಾರ್ವಜನಿಕರಲ್ಲಿ ಉಳಿದಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶನಿವಾರ ಹೇಳಿದೆ.
2000 ರೂ. ಮುಖಬೆಲೆಯ ನೋಟನ್ನು ಚಲಾವಣೆಯಿಂದ ಹಿಂಪಡೆಯುತ್ತಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ 2023 ಮೇ 19ರಂದು ಘೋಷಿಸಿತ್ತು.
2023 ಮೇ 19ರ ವೇಳೆಗೆ 2000 ರೂ. ಮುಖಬೆಲೆಯ 3.56 ಲಕ್ಷ ಕೋ. ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿದ್ದುವು. 2025 ಫೆಬ್ರವರಿ 28ಕ್ಕೆ ಅದು 6,471 ಕೋ.ರೂ.ಗೆ ಇಳಿಕೆಯಾಗಿತ್ತು ಎಂದು ಆರ್ಬಿಐ ತಿಳಿಸಿದೆ.
2023 ಅಕ್ಟೋಬರ್ 7ರ ವರೆಗೆ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ 2000 ರೂ. ನೋಟಿನ ಜಮೆ ಅಥವಾ ವಿನಿಯಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ನ 19 ಸೂಚಿತ ಕಚೇರಿಗಳಲ್ಲಿ ಈಗಲೂ ಈ ಸೌಲಭ್ಯ ಮುಂದುವರಿದಿದೆ.
Next Story