ಹ್ಯಾಕಿಂಗ್ ಅಪಾಯ ಅಧಿಕ |ಐಫೋನ್, ಐಪ್ಯಾಡ್ , ಮ್ಯಾಕ್ಬುಕ್ ಬಳಕೆದಾರರಿಗೆ ಕೇಂದ್ರ ಸರಕಾರದ ಎಚ್ಚರಿಕೆ
Photo : NDTV
ಹೊಸದಿಲ್ಲಿ : ಆ್ಯಪಲ್ ಕಂಪೆನಿಯ ಐಫೋನ್ಗಳು, ಮ್ಯಾಕ್ಬುಕ್ಗಳು, ಐಪ್ಯಾಡ್ಗಳು ಹಾಗೂ ವಿಶನ್ ಪ್ರೊ ಹೆಡ್ಸೆಟ್ಗಳನ್ನು ಬಳಸುವುದು ಅಪಾಯಕಾರಿಯಾಗಿದ್ದು, ಹ್ಯಾಕರ್ಗಳ ದಾಲಿಗೆ ತುತ್ತಾಗುವ ಸಾಧ್ಯತೆಯಿದೆಯೆಂದು ಭಾರತೀಯ ಕಂಪ್ಯೂಟರ್ತುರ್ತ ಪ್ರತಿಕ್ರಿಯಾ (ಸಿಇಆರ್ಟಿ-ಇನ್) ತಂಡವು ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.
ದೂರದಿಂದಲೇ ಹ್ಯಾಕರ್ಗಳು ಆ್ಯಪಲ್ ಕಂಪೆನಿಯ ಉತ್ಪನ್ನಗಳನ್ನು (ಐಫೋನ್,ಮ್ಯಾಕ್ಬುಕ್ ಇತ್ಯಾದಿ) ಹ್ಯಾಕ್ ಮಾಡಿ ಹಣ ಎಗರಿಸುವ ಅಪಾಯವಿದೆ ಅಲ್ಲದೆ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕದಿಯುವ ಸಾಧ್ಯತೆಯಿದೆಯೆಂದು ಅದು ಹೇಳಿದೆ.
ಆ್ಯಪಲ್ ಕಂಪೆನಿಯ ವಿವಿಧ ಉತ್ಪನ್ನಗಳನ್ನು ರಿಮೋಟ್ ಕೋಡ್ ಎಕ್ಸ್ಕ್ಯೂಶನ್ಗೆ ಸಂಪರ್ಕಿಸುವಾಗ ಸುರಕ್ಷತಾ ಲೋಪಗಳು ಉಂಟಾಗುವ ಅಪಾಯವಿದೆಯಂದು ಸಿಇಆರ್ಟಿ-ಎನ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಐಫೋನ್ ಎಕ್ಸ್ಎಸ್, ಐಪ್ಯಾಡ್ ಪ್ರೊ 12.9 ಇಂಚು, ಐಪ್ಯಾಡ್ ಪ್ರೊ 10.5 ಇಂಚು, ಐಪ್ಯಾಡ್ ಪ್ರೊ 11 ಇಂಚು, ಐಪ್ಯಾಡ್ ಏರ್, ಐಪ್ಯಾಡ್ ಹಾಗೂ ಐಪ್ಯಾಡ್ ಮಿನಿ ಬಳಸುವವರಿಗೆ ಅಧಿಕ ಅಪಾಯವಿದೆ. ಇದರ ಜೊತೆಗೆ ಐಫೋನ್ 8, ಐಫೋನ್ 8 ಪ್ಲಸ್, ಐಪ್ಯಾಡ್ ಫಿಫ್ತ್ ಜನರೇಶನ್, ಐಪ್ಯಾಡ್ ಪ್ರೊ 9.7 ಇಂಚು ಹಾಗೂ ಐಪ್ಯಾಡ್ ಪ್ರೊ 12.9 ಇಂಚು 1 ಜನರೇಶನ್ ಬಳಕೆದಾರರೂ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ. ಆದುದರಿಂದ ಈ ಉಪಕರಣಗಳ ಅಪ್ಡೇಟ್ ಆದ ಆವೃತ್ತಿಗಳನ್ನೇ ಬಳಸಿಕೊಳ್ಳುವಂತೆ ಅದು ಶಿಫಾರಸು ಮಾಡಿದೆ.