ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ
ಸಾಂದರ್ಭಿಕ ಚಿತ್ರ. | Photo: PTI
ಹೊಸದಿಲ್ಲಿ : ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡಿದ್ದು ಅಂದಾಜು 83.14 ರೂ. ಆಗಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಎಲೆ ಹೆಚ್ಚಳ ಹಾಗೂ ಅಮೆರಿಕದ ಡಾಲರ್ ಕರೆನ್ಸಿ ಬಲಿಷ್ಠಗೊಂಡಿದ್ದುದೇ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವೆನ್ನಲಾಗಿದೆ.
ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯವು ಗುರುವಾರದ ಆರು ತಿಂಗಳುಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ವಿದೇಶಿ ವಿನಿಮಯ (ಫಾರೆಕ್ಸ್) ವರ್ತಕರು ಹೇಳಿದ್ದಾರೆ.
ದಿನದ ವಹಿವಾಟಿನ ಆರಂಭದಲ್ಲಿ ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಕರೆನ್ಸಿಯು 83.08ಕ್ಕೆ ಆಗಿದ್ದು, ದಿನದ ವಹಿವಾಟಿನ ಅಂತ್ಯಕ್ಕೆ 83.18ಕ್ಕೆ ಕುಸಿಯಿತು ಎಂದು ಫಾರೆಕ್ಸ್ ಮೂಲಗಳು ತಿಳಿಸಿವೆ.
ಭಾರತೀಯ ಕರೆನ್ಸಿಯು ಈ ವರ್ಷದ ಆಗಸ್ಟ್ 21ರಂದು 83.13 ರೂ. ಆಗಿದ್ದು ಅದು ಈ ವರ್ಷದ ಅತ್ಯಧಿಕ ಕುಸಿತವಾಗಿತ್ತು.
Next Story