ಉರ್ದು ಮತ್ತು ಇಸ್ಲಾಮಿಕ್ ಸಂಸ್ಕೃತಿಯ ರಶ್ಯನ್ ವಿದ್ವಾಂಸೆ ಅನ್ನಾ ಸುವರೋವ್ ನಿಧನ
ಅನ್ನಾ ಸುವರೋವ್ | thewire.in
ಮಾಸ್ಕೊ: ಸಾಹಿತ್ಯ ಮತ್ತು ಕಲಾಕ್ಷೇತ್ರದಲ್ಲಿ ಖ್ಯಾತ ಹೆಸರು ಮತ್ತು ರಶ್ಯದ ಉರ್ದು ವಿದ್ವಾಂಸೆ ಅನ್ನಾ ಸುವರೋವ್ (75) ಅವರು ನ.24ರಂದು ನಿಧನರಾಗಿದ್ದಾರೆ.
ಹೆಚ್ಚಿನ ಉರ್ದು ಭಾಷಿಕರಿಗೆ ಸುವರೋವ್ ಬಗ್ಗೆ ಗೊತ್ತಿಲ್ಲದಿರಬಹುದು, ವೃತ್ತ ಪತ್ರಿಕೆಗಳೂ ಅವರ ಬಗ್ಗೆ ಹೆಚ್ಚಿನದನ್ನು ಬರೆದಿಲ್ಲ. ಅನ್ನಾ ಒಂದಿಲ್ಲೊಂದು ರೀತಿಯಲ್ಲಿ ಸಖ್ಯವನ್ನು ಹೊಂದಿದ್ದ ಲಕ್ನೋ ಮತ್ತು ದಿಲ್ಲಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳೂ ಅವರನ್ನು ಸ್ಮರಿಸಿಲ್ಲ.
ಅನ್ನಾ ತನ್ನ ರಶ್ಯನ್ ಧಾಟಿಯಲ್ಲಿ ನಿರರ್ಗಳವಾಗಿ ಉರ್ದು ಮಾತನಾಡುತ್ತಿದ್ದನ್ನು ಕೆಲವೇ ಜನರು ಕೇಳಿರಬಹುದು ಅಥವಾ ನೋಡಿರಬಹುದು,ಆದಾಗ್ಯೂ ಅವರು ಶೈಕ್ಷಣಿಕ ವಲಯದಲ್ಲಿ ಗೊತ್ತಿದ್ದ ಹೆಸರೇ ಆಗಿದ್ದರು.
1949,ಜ.11ರಂದು ಮಾಸ್ಕೋದಲ್ಲಿ ಜನಿಸಿದ್ದ ಅನ್ನಾ, ಲಕ್ನೋ ವಿವಿ ಮತ್ತು ಜೆಎನ್ಯುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು, ಜೊತೆಗೆ ಸ್ಕೂಲ್ ಆಫ್ ಓರಿಯಂಟಲ್ ಸ್ಟಡೀಸ್ ಮತ್ತು ಲಾಹೋರ್ನ ನ್ಯಾಷನಲ್ ಸ್ಕೂಲ್ ಆಫ್ ಆರ್ಟ್ಸ್ ಜೊತೆಗೂ ಗುರುತಿಸಿಕೊಂಡಿದ್ದರು. ಅವರು ರಶ್ಯನ್ ಅಕಾಡೆಮಿ ಆಫ್ ಸೈನ್ಸಸ್ನಲ್ಲಿ ಏಶ್ಯನ್ ಸಾಹಿತ್ಯ ವಿಭಾಗದ ಮುಖ್ಯಸ್ಥರಾಗಿದ್ದರು.
ಅನುವಾದಕರ ಮೂಲಕ ರಶ್ಯನ್ ಭಾಷೆಯಲ್ಲಿ ಉರ್ದು ಸಾಹಿತ್ಯದ ಮೂಲಭೂತ ಮತ್ತು ವಿಶ್ಲೇಷಣಾ ಸಂಶೋಧನೆಯ ಮೂಲಕ ಸಾಹಿತ್ಯಿಕ ಕೊಡುಗೆಗೆ ಅನ್ನಾ ಪ್ರಸಿದ್ಧರಾಗಿದ್ದರು.
ಅನ್ನಾ ಲುಡ್ಮಿಲಾ ವಾಸೆಲಿವೆಯಾ (ಸಮಕಾಲೀನ ರಶ್ಯನ್ ವಿದ್ವಾಂಸೆ ಮತ್ತು ಸ್ನೇಹಿತೆ) ನಂತರ ಎರಡನೇ ರಶ್ಯನ್ ಪೌರಸ್ತ್ಯ ವಿದ್ವಾಂಸೆಯಾಗಿದ್ದರು. ಲುಡ್ಲಿಲಾರ ಕೃತಿಗಳು ಭಾರತೀಯ ಉಪಖಂಡದ ಜನರಿಗೆ ಪರಿಚಿತವಾಗಿದ್ದವು. ಅನ್ನಾ ಭಾರತದಲ್ಲಿ ಲುಡ್ಮಿಲಾರಷ್ಟು ಪ್ರಸಿದ್ಧರಾಗಿರಲಿಲ್ಲ, ಆದರೆ ಪಾಕಿಸ್ತಾನದಲ್ಲಿ ಸಾಕಷ್ಟು ಪ್ರಸಿದ್ಧ ವ್ಯಕ್ತಿಯಾಗಿದ್ದರು.
ಕೃಪೆ: thewire.in