ಎನ್ಐಎ ಮುಖ್ಯಸ್ಥರಾಗಿ ಸದಾನಂದ ವಸಂತ್ ಡಾಟೆ ಅಧಿಕಾರ ಸ್ವೀಕಾರ
ಸದಾನಂದ ವಸಂತ್ ಡಾಟೆ | Photo: PTI
ಹೊಸದಿಲ್ಲಿ : ಕೇಂದ್ರೀಯ ಭಯೋತ್ಪಾದನೆ ನಿಗ್ರಹ ತನಿಖಾ ಸಂಸ್ಥೆಯಾಗಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ನೂತನ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಸದಾನಂದ ವಸಂತ್ ಡಾಟೆ ರವಿವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಅದಕ್ಕೂ ಮೊದಲು, 1990ರ ಸಾಲಿನ ಐಪಿಎಸ್ ಅಧಿಕಾರಿಯಾಗಿರುವ ಡಾಟೆ ಮಹಾರಾಷ್ಟ್ರ ಪೊಲೀಸ್ ನ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್)ದ ಮುಖ್ಯಸ್ಥರಾಗಿದ್ದರು.
ಮಹಾರಾಷ್ಟ್ರ ಕ್ಯಾಡರ್ನ ಐಪಿಎಸ್ ಅಧಿಕಾರಿಯಾಗಿರುವ ಅವರು ರವಿವಾರ ಸೇವೆಯಿಂದ ನಿವೃತ್ತರಾದ ಹಾಲಿ ಎನ್ಐಎ ಮುಖ್ಯಸ್ಥ ದಿನಕರ್ ಗುಪ್ತರಿಂದ ಅಧಿಕಾರ ವಹಿಸಿಕೊಂಡರು.
ಹಿಂದಿನ ದಿನಗಳಲ್ಲಿ ಡಾಟೆ ಮಿರಾ ಭಾಯಂದರ್ ವಸಾಯ್ ವಿರಾರ್ ಪೊಲೀಸ್ ಕಮಿಶನರ್, ಕಾನೂನು ಮತ್ತು ವ್ಯವಸ್ಥೆಯ ಜಂಟಿ ಕಮಿಶನರ್ ಮತ್ತು ಮುಂಬೈ ಕ್ರೈಮ್ ಬ್ರಾಂಚ್ನ ಜಂಟಿ ಕಮಿಶನರ್ ಆಗಿ ಸೇವೆ ಸಲ್ಲಿಸಿದ್ದರು.
ಅವರು ಸಿಬಿಐನಲ್ಲಿ ಎರಡು ಅವಧಿಗಳಲ್ಲಿ ಡಿಐಜಿಯಾಗಿ ಮತ್ತು ಸಿಆರ್ಪಿಎಫ್ ನ ಇನ್ಸ್ ಪೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.
Next Story