ದಿಲ್ಲಿ ವಿಧಾನಸಭಾ ಚುನಾವಣೆ | ಕಾಂಗ್ರೆಸ್-ಆಪ್ ಮಧ್ಯೆ ಚುನಾವಣಾ ಮೈತ್ರಿ ಏರ್ಪಟ್ಟಿದ್ದಲ್ಲಿ ಬಿಜೆಪಿ ಧೂಳೀಪಟ: ಸಂಜಯ್ ರಾವತ್

ಸಂಜಯ್ ರಾವತ್ | PC : PTI
ಮುಂಬೈ: ಒಂದು ವೇಳೆ ಕಾಂಗ್ರೆಸ್-ಆಪ್ ಮಧ್ಯೆ ಚುನಾವಣಾ ಮೈತ್ರಿ ಏರ್ಪಟ್ಟಿದ್ದಲ್ಲಿ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಧೂಳೀಪಟವಾಗುತ್ತಿತ್ತು ಎಂದು ಶಿವಸೇನಾ (ಉದ್ಧವ್)ದ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಮುಂಬೈಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘‘ಆಪ್ ಹಾಗೂ ಕಾಂಗ್ರೆಸ್ ನಡುವೆ ಚುನಾವಣಾ ಮೈತ್ರಿಯಿರುತ್ತಿದ್ದರೆ ಪರಿಸ್ಥಿತಿಯು ಚೆನ್ನಾಗಿರುತ್ತಿತ್ತು. ಆದರೆ ಉಭಯ ಪಕ್ಷಗಳೂ ಬಿಜೆಪಿ ಪ್ರತ್ಯೇಕವಾಗಿ ಹೋರಾಡಿದ್ದವು. ಒಂದು ವೇಳೆ ಅವು ಜಂಟಿಯಾಗಿ ಸ್ಪರ್ಧಿಸುತ್ತಿದ್ದರೆ, ಬಿಜೆಪಿಯ ಸೋಲುವುದು ಖಚಿತವಾಗಿತ್ತು. ಈ ಚುನಾವಣೆಯಿಂದ ನಾವು ಪಾಠವನ್ನು ಕಲಿಯಬೇಕಾಗಿದೆ’’ ಎಂದು ಹೇಳಿದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 39 ಲಕ್ಷಕ್ಕೂ ಅಧಿಕ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿತ್ತೆಂದು ಅವರು ಆಪಾದಿಸಿದರು.
‘‘ಈ ಮತಗಳು ಬಿಹಾರಕ್ಕೆ ಹೋಗಲಿಲ್ಲ. ಕೆಲವು ಮತಗಳು ದಿಲ್ಲಿಗೂ ಹೋಗಿವೆ. ಮಹಾರಾಷ್ಟ್ರದಲ್ಲಿ ಅನುಸರಿಸಿದ ಮಾದರಿಯನ್ನೇ ದಿಲ್ಲಿಯಲ್ಲೂ ಪುನರಾವರ್ತಿಸಲಾಗಿದೆ. ಚುನಾವಣಾ ಆಯೋಗ ಕಣ್ಣುಮುಚ್ಚಿ ಕುಳಿತಿದೆ ಎಂದು ರಾವತ್ ಆಪಾದಿಸಿದರು.