"ಈ ಫಲಿತಾಂಶವನ್ನು ನಾವು ಒಪ್ಪಿಕೊಳ್ಳುವುದಿಲ್ಲ": ಮಹಾರಾಷ್ಟ್ರದಲ್ಲಿ ʼಮಹಾಯುತಿʼಗೆ ಮುನ್ನಡೆ ಬೆನ್ನಲ್ಲೇ ಸಂಜಯ್ ರಾವತ್ ಪ್ರತಿಕ್ರಿಯೆ
"ಇದು ಮಹಾರಾಷ್ಟ್ರದ ಜನರ ನಿರ್ಧಾರವಾಗಿರಲು ಸಾಧ್ಯವಿಲ್ಲ"
ಸಂಜಯ್ ರಾವತ್ (Photo: X/PTI)
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಮತ ಎಣಿಕೆಯಲ್ಲಿ ಮಹಾಯುತಿ ಮೈತ್ರಿಯು ಮುನ್ನಡೆ ಸಾಧಿಸುತ್ತಿದ್ದಂತೆ ಶಿವಸೇನಾ ಉದ್ಧವ್ ಬಣದ ನಾಯಕ ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದು, ಈ ಫಲಿತಾಂಶಗಳನ್ನು ನಾವು ಒಪ್ಪಿಕೊಳ್ಳುವುದಿಲ್ಲ, ಇದು ಜನರ ಆದೇಶ ಎಂದು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ ಎಂದು ಹೇಳಿದ್ದಾರೆ.
ಇದು ಮಹಾರಾಷ್ಟ್ರದ ಜನರ ನಿರ್ಧಾರವಾಗಿರಲು ಸಾಧ್ಯವಿಲ್ಲ, ಮಹಾರಾಷ್ಟ್ರದ ಜನರಿಗೆ ಏನು ಬೇಕು ಎಂದು ನಮಗೆ ತಿಳಿದಿದೆ. ಗೌತಮ್ ಅದಾನಿ ವಿರುದ್ಧ ಎರಡು ದಿನಗಳ ಹಿಂದೆ ಲಂಚ ಪ್ರಕರಣದಲ್ಲಿ ಬಂಧನ ವಾರೆಂಟ್ ಜಾರಿಯಾಗಿತ್ತು, ಇದರಲ್ಲಿ ಬಿಜೆಪಿಯ ಅಸಲಿಯತ್ತು ಬಹಿರಂಗವಾಗಿತ್ತು. ಪ್ರತಿ ಕ್ಷೇತ್ರದಲ್ಲೂ ಹಣ ಹಂಚಲಾಗಿದೆ. ಮಹಾರಾಷ್ಟ್ರದ ಜನರು ಪ್ರಾಮಾಣಿಕರು, ಆದರೆ ಇಲ್ಲಿ ಚುನಾವಣಾ ಪ್ರಕ್ರಿಯೆಯು ದೊಡ್ಡ ಮಟ್ಟದ ಅಪ್ರಾಮಾಣಿಕತೆಯನ್ನು ಕಂಡಿದೆ. ನಾವು ಸಾರ್ವಜನಿಕರ ಭಾವನೆಯನ್ನು ತಿಳಿದಿದ್ದೇವೆ, ಆದರೆ ಈ ಫಲಿತಾಂಶವು ಜನಾಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದ್ದಾರೆ.
Next Story