ದಾರಿ ತಪ್ಪಿಸುವ ಎಕ್ಸಿಟ್ ಪೋಲ್ ಪ್ರಸಾರ ಆರೋಪ: ಮಾಧ್ಯಮಗಳ ವಿರುದ್ಧ ತನಿಖೆ ಕೋರಿದ್ದ PIL ವಜಾಗೊಳಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ : 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳಿಗೆ ಮುಂಚಿತವಾಗಿ ಎಕ್ಸಿಟ್ ಪೋಲ್‌ಗಳನ್ನು ಪ್ರಸಾರ ಮಾಡುವ ಮೂಲಕ ಷೇರು ಮಾರುಕಟ್ಟೆ ಹೂಡಿಕೆದಾರರನ್ನು ದಾರಿ ತಪ್ಪಿಸುವ ಆರೋಪದ ಮೇಲೆ ಹಲವಾರು ಮಾಧ್ಯಮ ಸಂಸ್ಥೆಗಳ ವಿರುದ್ಧ ತನಿಖೆಗೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಎಂದು Live Law ವರದಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು ಬಿಎಲ್ ಜೈನ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿಹಾಕಿತು. ಅರ್ಜಿಯು ರಾಜಕೀಯ ಹಿತಾಸಕ್ತಿ ಹೊಂದಿದೆ ಎಂದು ನ್ಯಾಯಾಲಯವು ಬೆಟ್ಟು ಮಾಡಿತು.
ಜೂನ್ 4 ರಂದು ನಡೆದ ಚುನಾವಣಾ ಫಲಿತಾಂಶಗಳು ಎಕ್ಸಿಟ್ ಪೋಲ್‌ಗಳು ಹೇಳಿದ್ದ ಭವಿಷ್ಯವನ್ನು ಧಿಕ್ಕರಿಸಿದ್ದವು. ಹೆಚ್ಚಿನ ಎಕ್ಸಿಟ್ ಪೋಲ್ ಗಳು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(NDA)ವು 350 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿದ್ದವು. ಆದರೆ, NDA ಕೇವಲ 292 ಸ್ಥಾನಗಳನ್ನು ಪಡೆದುಕೊಂಡಿತು.
ಬಿಜೆಪಿ ಸ್ವಂತ ಬಲದಿಂದ ಬಹುಮತ ಗಳಿಸುವುದಿಲ್ಲ ಮತ್ತು ಅಧಿಕಾರ ಉಳಿಸಿಕೊಳ್ಳಲು ಮಿತ್ರಪಕ್ಷಗಳ ಬೆಂಬಲ ಬೇಕು ಎಂಬುದು ಸ್ಪಷ್ಟವಾಗುತ್ತಿದ್ದಂತೆ ಮತ ಎಣಿಕೆ ವೇಳೆ ಷೇರುಪೇಟೆಗಳು ಕುಸಿದವು.
ಅಂದು ಸೆನ್ಸೆಕ್ಸ್ 4,389.73 ಪಾಯಿಂಟ್ ಅಥವಾ 5.74% ಕುಸಿದು 72,079.05 ಕ್ಕೆ ತಲುಪಿತ್ತು. ನಿಫ್ಟಿSupreme Court stays bail condition requiring Tamil Nadu YouTuber to shut down his channelಯು 1,379.40 ಪಾಯಿಂಟ್ ಅಥವಾ 5.93% ನಷ್ಟು ಕುಸಿದು 21,884.50 ಕ್ಕೆ ತಲುಪಿತ್ತು.
ಜೂನ್ 4 ರಂದು ಅಂತಿಮ ಫಲಿತಾಂಶಗಳು ಪ್ರಕಟವಾದಾಗ ಷೇರು ಮಾರುಕಟ್ಟೆಗಳು ತೀವ್ರ ಏರಿಕೆ ಮತ್ತು ತಕ್ಷಣದ ಕುಸಿತವನ್ನು ಕಂಡವು ಎಂದು ಜೈನ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. ಜೂನ್ 1 ರಂದು ಲೋಕಸಭೆ ಚುನಾವಣೆಯ ಕೊನೆಯ ಹಂತ ಮುಗಿದ ನಂತರ ಮಾಧ್ಯಮಗಳು ಎಕ್ಸಿಟ್ ಪೋಲ್‌ಗಳ ಫಲಿತಾಂಶಗಳನ್ನು ಬಿಡುಗಡೆ ಮಾಡಿದ ನಂತರ ಷೇರು ಮಾರುಕಟ್ಟೆಗಳು ಒಮ್ಮೆಲೇ ಏರಿದ್ದವು.
ಇದರಿಂದ ಸಾರ್ವಜನಿಕರು ಮಾಡಿದ ಹೂಡಿಕೆಗೆ 31 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.