ಅತಿಯಾದ ಉಷ್ಣಾಂಶ | ಗುವಾಹಟಿಯ ಶಾಲೆಗಳಿಗೆ ನಾಲ್ಕು ದಿನ ರಜಾ
ಆದೇಶ ಪ್ರಕಟವಾಗುತ್ತಿದ್ದಂತೆ ಭಾರೀ ಮಳೆ!
ಸಾಂದರ್ಭಿಕ ಚಿತ್ರ
ಗುವಾಹಟಿ : ಅತಿಯಾದ ಉಷ್ಣಾಂಶ ವಾತಾವರಣ ಮುಂದುವರಿದಿರುವುದರಿಂದ ಅಸ್ಸಾಂನ ಕಾಮ್ರೂಪ್ ಮಹಾನಗರ ಜಿಲ್ಲೆಯಲ್ಲಿನ ಗುವಾಹಟಿಯ ಶಾಲೆಗಳನ್ನು ನಾಲ್ಕು ದಿನಗಳ ಕಾಲ ಮುಚ್ಚಲು ಆದೇಶಿಸಲಾಗಿದೆ ಎಂದು ವರದಿಯಾಗಿದೆ.
ಹವಾಮಾನ ಇಲಾಖೆಯ ಪ್ರಕಾರ, ರವಿವಾರ ರಾಜ್ಯ ರಾಜಧಾನಿಯಲ್ಲಿನ ಗರಿಷ್ಠ ತಾಪಮಾನವು 37.9 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದ್ದು, ಇದು ಸಾಮಾನ್ಯ ಹವಾಮಾನಕ್ಕಿಂತ 5.9 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚು ಎಂದು ಹೇಳಲಾಗಿದೆ. ಕನಿಷ್ಠ ತಾಪಮಾನ ಕೂಡಾ ಸಾಮಾನ್ಯ ತಾಪಮಾನವಾದ 28.2 ಡಿಗ್ರಿ ಸೆಲ್ಸಿಯಸ್ ಗಿಂತ 3.8 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಿದೆ.
ಸೋಮವಾರ ಜಿಲ್ಲಾ ಶಾಲಾ ಶಿಕ್ಷಣಾಧಿಕಾರಿ ಹೊರಡಿಸಿರುವ ಅಧಿಕೃತ ಆದೇಶದ ಪ್ರಕಾರ, ಹಲವಾರು ಶಾಲೆಗಳ ವಿದ್ಯಾರ್ಥಿಗಳಲ್ಲಿ ಅತಿಯಾದ ಉಷ್ಣಾಂಶದಿಂದ ಅಸ್ವಸ್ಥತೆ ಮತ್ತು ನಿರ್ಜಲೀಕರಣದಂತಹ ಘಟನೆಗಳು ವರದಿಯಾಗಿವೆ ಎನ್ನಲಾಗಿದೆ.
ವಿದ್ಯಾರ್ಥಿಗಳು ಅತಿಯಾದ ಉಷ್ಣಾಂಶದಿಂದ ಅಸ್ವಸ್ಥತೆಗೆ ತುತ್ತಾಗುವುದರಿಂದ ರಕ್ಷಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದೂ ಜಿಲ್ಲಾ ಶಾಲಾ ಶಿಕ್ಷಣಾಧಿಕಾರಿ ಹೇಳಿದ್ದಾರೆ.
ಈ ಆದೇಶ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ನಗರದಾದ್ಯಂತ ಭಾರಿ ಮಳೆಯಾಗಿದೆ ಎಂದೂ ವರದಿಯಾಗಿದೆ.