ಮ್ಯೂಚ್ಯುಯಲ್ ಫಂಡ್ ನಿಯಮಗಳ ಉಲ್ಲಂಘನೆ : ಎಡೆಲ್ ವೈಸ್ ಅಸೆಟ್ ಮ್ಯಾನೇಜ್ ಮೆಂಟ್ ಗೆ ರೂ. 16 ಲಕ್ಷ ದಂಡ ವಿಧಿಸಿದ ಸೆಬಿ
PC : PTI
ಹೊಸದಿಲ್ಲಿ: ಮ್ಯೂಚ್ಯುಯಲ್ ಫಂಡ್ಸ್ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ಎಡೆಲ್ ವೈಸ್ ಅಸೆಟ್ ಮ್ಯಾನೇಜ್ ಮೆಂಟ್ ಲಿಮಿಟೆಡ್, ಅದರ ಸಿಇಒ ರಾಧಿಕಾ ಗುಪ್ತ ಹಾಗೂ ನಿಧಿ ವ್ಯವಸ್ಥಾಪಕ ತ್ರಿದೀಪ್ ಭಟ್ಟಾಚಾರ್ಯ ಅವರಿಗೆ ಬಂಡವಾಳ ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿ ರೂ. 16 ಲಕ್ಷ ದಂಡ ವಿಧಿಸಿದೆ.
ಎಡೆಲ್ ವೈಸ್ ಅಸೆಟ್ ಮ್ಯಾನೇಜ್ ಮೆಂಟ್ ಸಂಸ್ಥೆಯ ಮೇಲೆ ವೈಯಕ್ತಿಕವಾಗಿ ರೂ. 8 ಲಕ್ಷ ದಂಡ ವಿಧಿಸಲಾಗಿದ್ದು, ಗುಪ್ತ ಹಾಗೂ ಭಟ್ಟಾಚಾರ್ಯರಿಗೆ ತಲಾ ರೂ. 4 ಲಕ್ಷ ದಂಡ ವಿಧಿಸಲಾಗಿದೆ. ಅಲ್ಲದೆ, ಈ ಮೊತ್ತವನ್ನು 45 ದಿನಗಳೊಳಗಾಗಿ ಪಾವತಿಸಬೇಕು ಎಂದು ಸೆಬಿ ಆದೇಶಿಸಿದೆ.
ಮ್ಯೂಚುವಲ್ ಫಂಡ್ ನೈಜವಾಗಿಯೇ ಇಲ್ಲವೆ ಎಂಬ ಕುರಿತು ಉದ್ಯಮಗಳ ವಿಶ್ಲೇಷಣೆ ಕೈಗೊಂಡಾಗ 88 ದಿನಗಳಲ್ಲಿ ಗರಿಷ್ಠ 30 ಷೇರುಗಳಲ್ಲಿ ಮುಕ್ತವಾಗಿ ಹೂಡಿಕೆ ಮಾಡುವ ಈಕ್ವಿಟಿ ಯೋಜನೆಯ ನಿಯಮವನ್ನು ಎಡೆಲ್ ವೈಸ್ ಫೋಕಸ್ಡ್ ಈಕ್ವಿಟಿ ಫಂಡ್ ಉಲ್ಲಂಘಿಸಿರುವುದನ್ನು ಸೆಬಿ ಪತ್ತೆ ಹಚ್ಚಿದೆ.
Next Story