ಹೊಸದಿಲ್ಲಿ- ವಾರಣಾಸಿ ನಡುವೆ ಎರಡನೇ ವಂದೇ ಭಾರತ ರೈಲಿಗೆ ಚಾಲನೆ
ವಂದೇ ಭಾರತ ರೈಲು | Photo: PTI
ವಾರಣಾಸಿ: ಹೊಸದಿಲ್ಲಿ ಮತ್ತು ವಾರಣಾಸಿ ನಡುವೆ ಎರಡನೇ ವಂದೇ ಭಾರತ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಚಾಲನೆ ನೀಡಿದರು. ಕೇಸರಿ ಬಣ್ಣದ ಈ ರೈಲು ಹಲವಾರು ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಇದು ದೇಶದ ಎರಡನೇ ಕೇಸರಿ ವಂದೇ ಭಾರತ ರೈಲು ಆಗಿದೆ ಎಂದು ರೈಲ್ವೆ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಮಂಗಳವಾರ ಹೊರತುಪಡಿಸಿ ವಾರದ ಎಲ್ಲ ದಿನಗಳಲ್ಲಿ ಬೆಳಿಗ್ಗೆ ಆರು ಗಂಟೆಗೆ ವಾರಣಾಸಿಯಿಂದ ನಿರ್ಗಮಿಸುವ ನೂತನ ರೈಲು ಅಪರಾಹ್ನ 2:05ಕ್ಕೆ ಹೊಸದಿಲ್ಲಿಯನ್ನು ತಲುಪುತ್ತದೆ. ಮರುಪ್ರಯಾಣದಲ್ಲಿ ಹೊಸದಿಲ್ಲಿಯಿಂದ ಅಪರಾಹ್ನ ಮೂರು ಗಂಟೆಗೆ ನಿರ್ಗಮಿಸಿ ವಾರಣಾಸಿಯನ್ನು ರಾತ್ರಿ 11:05ಕ್ಕೆ ತಲುಪುತ್ತದೆ.
ರೈಲ್ವೆ ಇಲಾಖೆಯು ತನ್ನ ಮೊದಲ ವಂದೇ ಭಾರತ ರೈಲಿನ ಸಂಚಾರವನ್ನು ಸೆ.24ರಂದು ಕೇರಳದ ಕಾಸರಗೋಡು ಮತ್ತು ತಿರುವನಂತಪುರ ನಡುವೆ ಆರಂಭಿಸಿತ್ತು.
Next Story