ಹಿರಿಯ ಕಾಂಗ್ರೆಸ್ ನಾಯಕ, ಈರೋಡ್ ಶಾಸಕ ಇವಿಕೆಎಸ್ ಇಳಂಗೋವನ್ ನಿಧನ
ಇವಿಕೆಎಸ್ ಇಳಂಗೋವನ್ | PC : PTI
ಚೆನ್ನೈ : ತಮಿಳುನಾಡು ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ಇವಿಕೆಎಸ್ ಇಳಂಗೋವನ್(73) ಅವರು ಅಲ್ಪಕಾಲದ ಅನಾರೋಗ್ಯದ ಬಳಿಕ ಶನಿವಾರ ಬೆಳಿಗ್ಗೆ ಇಲ್ಲಿಯ ಮಿಯೋಟ್ ಆಸ್ಪತ್ರೆಯಲ್ಲಿ ನಿಧನರಾದರು. ಮುಂದಿನ ಶನಿವಾರ ಡಿ.21ರಂದು ಅವರು 74ನೇ ವರ್ಷದಲ್ಲಿ ಕಾಲಿರಿಸಲಿದ್ದರು. ಅವರನ್ನು ನ.13ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಳಂಗೋವನ್ ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.
ಅವರು ಈರೋಡ್(ಪೂರ್ವ)ನ ಹಾಲಿ ಶಾಸಕರಾಗಿದ್ದರು. 2023, ಜನವರಿಯಲ್ಲಿ ನಿಧನರಾದ ಅವರ ಪುತ್ರ ಇ.ತಿರುಮಹಾನ್ ಎವೆರಾ ಅವರು ಈ ಮುನ್ನ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
Next Story