ಪಹಲ್ಗಾಮ್ನಲ್ಲಿ ಪ್ರವಾಸಿಗರ ಹತ್ಯೆ: ಆಘಾತ ವ್ಯಕ್ತಪಡಿಸಿದ ಶಾರುಖ್ ಖಾನ್, ಸಲ್ಮಾನ್ ಖಾನ್

ಶಾರುಖ್ ಖಾನ್(x\ @iamsrk), ಸಲ್ಮಾನ್ ಖಾನ್(x \ @BeingSalmanKhan)
)
ಹೊಸದಿಲ್ಲಿ: ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿ ಬಗ್ಗೆ ಸಿನಿಮಾ ನಟರಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಆಘಾತವನ್ನು ವ್ಯಕ್ತಪಡಿಸಿದ್ದಾರೆ.
ʼಪಹಲ್ಗಾಮ್ನಲ್ಲಿ ನಡೆದ ಆಘಾತಕಾರಿ ಮತ್ತು ಅಮಾನವೀಯ ಹಿಂಸಾಚಾರದ ಬಗ್ಗೆ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಲು ಪದಗಳಿಲ್ಲ. ಇಂತಹ ಸನ್ನಿವೇಶಗಳಲ್ಲಿ ದುಃಖಿತ ಕುಟುಂಬಗಳಿಗಾಗಿ ದೇವರಲ್ಲಿ ಪ್ರಾರ್ಥಿಸಬಹುದು. ಆಳವಾದ ಸಂತಾಪವನ್ನು ವ್ಯಕ್ತಪಡಿಸಬಹುದು. ಈ ಹೇಯ ಕೃತ್ಯದ ವಿರುದ್ಧ ನಾವು ಒಗ್ಗಟ್ಟಾಗಿ, ಬಲವಾಗಿ ನಿಂತು ನ್ಯಾಯವನ್ನು ಪಡೆಯೋಣʼ ಎಂದು ಶಾರುಖ್ ಖಾನ್ ಎಕ್ಸ್ನಲ್ಲಿ ಹೇಳಿದ್ದಾರೆ.
ಸಲ್ಮಾನ್ ಖಾನ್ ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ʼಭೂಮಿಯ ಮೇಲಿನ ಸ್ವರ್ಗ ಕಾಶ್ಮೀರ ನರಕವಾಗಿ ಬದಲಾಗುತ್ತಿದೆ. ಮುಗ್ಧ ಜನರನ್ನು ಗುರಿಪಡಿಸಲಾಗುತ್ತಿದೆ. ನಾನು ಸಂತ್ರಸ್ತ ಕುಟುಂಬದ ಜೊತೆಗಿದ್ದೇನೆ. ಓರ್ವ ಅಮಾಯಕನ ಹತ್ಯೆ, ಇಡೀ ರಾಷ್ಟ್ರವನ್ನು ಹತ್ಯೆ ಮಾಡುವುದಕ್ಕೆ ಸಮಾನವಾಗಿದೆ ಎಂದು ಹೇಳಿದರು.