ಅಜಿತ್ ಪವಾರ್ ಬಣದ 41ಶಾಸಕರು, 5 ಎಂಎಲ್ಸಿಗಳ ಅನರ್ಹತೆ ಕೋರಿ ಸ್ಪೀಕರ್ಗೆ ಶರದ್ಪವಾರ್ ಬಣದ ಮನವಿ
ಶರದ್ಪವಾರ್ | Photo: PTI
ಹೊಸದಿಲ್ಲಿ :ಮಹಾರಾಷ್ಟ್ರದ ಆಡಳಿತಾರೂಢ ಬಿಜೆಪಿ-ಶಿವಸೇನಾ (ಶಿಂಧೆ ಬಣ) ಮೈತ್ರಿಕೂಟದ ಜೊತೆ ಕೈಜೋಡಿಸಿರುವ ತನ್ನ ಪಕ್ಷದ 41 ಶಾಸಕರು ಹಾಗೂ 5 ವಿಧಾನಪರಿಷತ್ ಸದಸ್ಯರ ಅನರ್ಹತೆ ಕೋರಿ ಶರದ್ಪವಾರ್ ನೇತೃತ್ವದ ಎನ್ಸಿಪಿ ಬಣವು ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಅವರಿಗೆ ಅರ್ಜಿಗಳನ್ನು ಸಲ್ಲಿಸಿದೆ.
ಅಜಿತ್ ಪವಾರ್ ನೇತೃತ್ವದ ಬಣದ 41 ಶಾಸಕರು ಹಾಗೂ ಐವರು ಎಂಎಲ್ಸಿಗಳನ್ನು ಅನರ್ಹಗೊಳಿಸುವಂತೆ ಕೋರಿ ಎನ್ಸಿಪಿ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಹಾಗೂ ವಿಧಾನಪರಿಷತ್ ನಾಯಕ ಜಯಂತ್ ಪಾಟೀಲ್ ಮತ್ತು ವಿಧಾನಸಭೆಯಲ್ಲಿ ಎನ್ಸಿಪಿಯ ಸಚೇತಕ ಜಿತೇಂದ್ರ ಆಹ್ವಾದ್ ಅವರು ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಅರ್ಜಿಗಳನ್ನು ಸಲ್ಲಿಸಿದ್ದರು.
ಕುತೂಹಲಕರವೆಂದರೆ ಈ ಮೊದಲು ಅಜಿತ್ ಪವಾರ್ ಅವರ ಜೊತೆ ಕೈಜೋಡಿಸಿದ್ದರೆಂದು ಹೇಳಲಾಗಿದ್ದ ಎನ್ಸಿಪಿ ಶಾಸಕ ನವಾಬ್ ಮಲ್ಲಿಕ್ ಅವರ ಹೆಸರು ಅನರ್ಹತಾ ಅರ್ಜಿಯ ಪಟ್ಟಿಯಲ್ಲಿ ಸೇರ್ಪಡೆಗೊಂಡಿಲ್ಲ. ಮಲ್ಲಿಕ್ ಅವರು ವೈದ್ಯಕೀಯ ಕಾರಣಗಳಿಗಾಗಿ ಎರಡುತಿಂಗಳುಗಳ ಕಾಲ ರಜೆಯಲ್ಲಿದ್ದಾರೆ.
ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ 9 ಮಂದಿ ಎನ್ಸಿಪಿ ಶಾಸಕರ ವಿರುದ್ಧ ಅನರ್ಹತಾ ಅರ್ಜಿಯನ್ನು ತಾವು ಮೊದಲು ಸಲ್ಲಿಸಿದ್ದಾಗಿ ಹಿರಿಯ ಎನ್ಸಿಪಿ ನಾಯಕ ಶರದ್ ಪವಾರ್ ನೇತೃತ್ವದ ಬಣವು ಜೂನ್ 2ರಂದು ತಿಳಿಸಿತ್ತು. ಲೋಕಸಭಾ ಸದಸ್ಯ ಸುನೀಲ್ತಾಟ್ಕೆ ಹಾಗೂ ರಾಜ್ಯಸಭಾ ಸಂಸದ ಪ್ರಫುಲ್ ಪಟೇಲ್ಲೋಕಸಭೆಗೆ ತಿಳಿಸಿದ್ದಾರೆ.
ಆನಂತರ ಕ್ರಮೇಣ ಶರದ್ ಬಣವು, 41 ಶಾಸಕರು ಹಾಗೂ 5 ಎಂಎಲ್ಸಿಗಳ ವಿರುದ್ಧವೂ ಅನರ್ಹತಾ ಅರ್ಜಿಗಳನ್ನು ಸಲ್ಲಿಸಿತ್ತು. ‘‘ಈ ಬಗ್ಗೆ ಭಾರತೀಯ ಚುನಾವಣಾ ಆಯೋಗಕ್ಕೂ ಅರ್ಜಿ ಸಲ್ಲಿಸಿದ್ದೇವೆ. ರಾಜ್ಯ ವಿಧಾನಸಭಾ ಸ್ಪೀಕರ್ ಈ ಅರ್ಜಿಗಳನ್ನು ಕೈಗೆತ್ತಿಕೊಂಡು ಅಲಿಕೆಗಳನ್ನು ನಡೆಸಲಿದ್ದು, ಯಾವುದೇ ಪೂರ್ವಾಗ್ರಹಗಳಿಲ್ಲದೆ ಪಕ್ಷಪಾತರಹಿತವಾಗಿ ವಿಚಾರಣೆಯನ್ನು ಆರಂಭಿಸಲಿದ್ದಾರೆ, ಬಳಿಕ ಅನರ್ಹತಾ ಪ್ರಕ್ರಿಯೆ ನಡೆಸಲಿದ್ದಾರೆ ಎಂಬ ಭರವಸೆಯನ್ನು ಹೊಂದಿದ್ದೇವೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಎನ್ಸಿಪಿ ಮುಖಂಡರೊಬ್ಬರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ತನ್ನ 41 ಎನ್ಸಿಪಿ ಶಾಸಕರ ಬೆಂಬಲ ವ್ಯಕ್ತಪಡಿಸಿ ಹಾಕಿರುವ ಸಹಿಗಳನ್ನು ಭಾರತೀಯ ಚುನಾವಣಾಆಯೋಗಕ್ಕೆ ಸಲ್ಲಿಸಿದ್ದರು. ಶರದ್ಪವಾರ್ ನೇತೃತ್ವದ ಎನ್ಸಿಪಿ ಬಣವು ಪ್ರಜಕಾ ತಾನ್ಪುರೆ, ರೋಹಿತ್ ಪವಾರ್, ಅನಿಲ್ ದೇಶಮುಖ್, ಜಯಂತ ಪಾಟೀಲ್, ಸುನೀಲ್ ಬುಸಾರಾ ಸೇರಿದಂತೆ 12 ಶಾಸಕರ ಬೆಂಬಲವನ್ನು ಹೊಂದಿದೆ.
Next Story