ರಾಜೀವ್ ಚಂದ್ರಶೇಖರ್ ವಿರುದ್ಧ ಶಶಿ ತರೂರ್ ಗೆ ಗೆಲುವು

ಶಶಿ ತರೂರ್ | PTI
ತಿರುವನಂತಪುರ : ಕೇರಳದ ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಹಾಲಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅವರು ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ರಾಜೀವ್ ಚಂದ್ರ ಶೇಖರ್ ಅವರನ್ನು 16,077 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಮತ ಎಣಿಕೆಯ ಆರಂಭದಲ್ಲಿ ಚಂದ್ರಶೇಖರ್ ಹಾಗೂ ತರೂರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇಬ್ಬರು ಕೂಡ ಒಮ್ಮೊಮ್ಮೆ ಕೆಲವೇ ಸಾವಿರ ಮತಗಳ ಮುನ್ನಡೆಸಾಧಿಸಿದ್ದರು. ಒಂದು ಸಂದರ್ಭ ರಾಜೀವ್ ಚಂದ್ರಶೇಖರ್ ಅವರು 20 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದರು. ಆದರೆ, ಶಶಿ ತರೂರ್ ಅವರನ್ನು ಹಿಂದಿಕ್ಕೆ ಮತ್ತೆ ಮುನ್ನಡೆ ಸಾಧಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಶಿ ತರೂರ್ ‘‘ಇದು ಮತದಾರರು ನಾಲ್ಕನೇ ಬಾರಿ ನೀಡುತ್ತಿರುವ ಆಶೀರ್ವಾದ. ಅವರು ನನ್ನ ಮೇಲೆ ಇರಿಸಿರುವ ನಂಬಿಕೆಗೆ ಋಣಿಯಾಗಿರಲು ನನಗೆ ಸಾಧ್ಯವಾಗುವಷ್ಟು ಸೇವೆ ಮಾಡುತ್ತೇನೆ’’ ಎಂದಿದ್ದಾರೆ.
Next Story