ಶಿವಸೇನೆ ಹೆಸರು, ಚಿಹ್ನೆ ಏಕನಾಥ್ ಶಿಂಧೆ ಬಣಕ್ಕೆ: ಜು. 21ರಂದು ಸುಪ್ರೀಂನಿಂದ ಉದ್ಧವ್ ಠಾಕ್ರೆ ಮನವಿ ವಿಚಾರಣೆ
ಉದ್ಧವ್ ಠಾಕ್ರೆ | PHOTO : PTI
ಹೊಸದಿಲ್ಲಿ: ‘ಶಿವಸೇನೆ’ ಹೆಸರು ಹಾಗೂ ‘ಬಿಲ್ಲು ಹಾಗೂ ಬಾಣ’ದ ಚಿಹ್ನೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಬಣಕ್ಕೆ ಮುಂಜೂರು ಮಾಡಿ ಚುನಾವಣಾ ಆಯೋಗ ನೀಡಿದ ಆದೇಶ ಪ್ರಶ್ನಿಸಿ ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಸಲ್ಲಿಸಿದ ಮನವಿಯನ್ನು ಜುಲೈ 31ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರ ಮುಂದೆ ಉದ್ಧವ್ ಠಾಕ್ರೆ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಅಮಿತ್ ಆನಂದ್ ತಿವಾರಿ ಅವರು, ಈ ಪ್ರಕರಣವನ್ನು ಕೊನೆಯದಾಗಿ ಫೆಬ್ರವರಿ 22ರಂದು ವಿಚಾರಣೆ ನಡೆಸಲಾಗಿದೆ. ಅಂದು ನ್ಯಾಯಾಲಯ ಮುಂದಿನ ಮೂರು ವಾರಗಳಲ್ಲಿ ವಿಚಾರಣೆ ನಡೆಸುವಂತೆ ನಿರ್ದೇಶಿಸಿತ್ತು. ಆದರೆ, ಇದುವರೆಗೆ ವಿಚಾರಣೆ ನಡೆದಿಲ್ಲ ಎಂದರು.
ವಿಚಾರಣೆಯನ್ನು ಜುಲೈ 31ರಂದು ನಿಗದಿಪಡಿಸಲಾಗಿದೆ. ಪ್ರಕರಣವನ್ನು ಅಂದು ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಹೇಳಿದರು.
Next Story