ಡಿ.3ರಂದು ಮಾತುಕತೆಗೆ ಕೇಂದ್ರ ಗೃಹಸಚಿವಾಲಯ ಒಪ್ಪಿಗೆ | ಉಪವಾಸ ಸತ್ಯಾಗ್ರಹ ಕೊನೆಗೊಳಿಸಿದ ಸೋನಮ್ ವಾಂಗ್ಚುಕ್
Photo: PTI
ಹೊಸದಿಲ್ಲಿ : ಲಡಾಖ್ ನ ಗುಂಪುಗಳೊಂದಿಗೆ ಡಿಸೆಂಬರ್ 3 ರಂದು ಸಭೆ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯವು ಭರವಸೆ ನೀಡಿದ ಬಳಿಕ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಮತ್ತು ಇತರರು ಸೋಮವಾರ ತಮ್ಮ ಉಪವಾಸ ಸತ್ಯಾಗ್ರಹಕ್ಕೆ ಅಂತ್ಯಹಾಡಿದ್ದಾರೆ.
ಲಡಾಖ್ ಕುರಿತ ತಮ್ಮ ಬೇಡಿಕೆಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಉನ್ನತ ನಾಯಕರು ಸಭೆ ನಡೆಸಬೇಕೆಂದು ಒತ್ತಾಯಿಸಿ ಸೋನಮ್ ವಾಂಗ್ಚುಕ್ ಸೇರಿದಂತೆ ಲಡಾಖ್ನ ಸುಮಾರು 25 ಮಂದಿ ಅಕ್ಟೋಬರ್ 6 ರಿಂದ ದಿಲ್ಲಿಯ ಲಡಾಖ್ ಭವನದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಲಡಾಖ್ ಅನ್ನು ಸಂವಿಧಾನದ ಆರನೇ ಪರಿಚ್ಛೇಧಕ್ಕೆ ಸೇರಿಸಬೇಕೆಂದು ಒತ್ತಾಯಿಸಿ ಸೋನಮ್ ವಾಂಗ್ಚುಕ್ ಅವರು ತಮ್ಮ ಬೆಂಬಲಿಗರೊಂದಿಗೆ ಲೇಹ್ನಿಂದ ದಿಲ್ಲಿಗೆ ಪಾದಯಾತ್ರೆ ನಡೆಸಿದ್ದರು. ಈ ನಿರ್ಧಾರವು ಪರಿಸರ-ಸೂಕ್ಷ್ಮ ಲಡಾಖ್ನಲ್ಲಿ ಪರಿಸರ ಸಂರಕ್ಷಣೆಗೆ ಸ್ಥಳೀಯರಿಗೆ ನೆರವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
Next Story