ಸ್ಪೇಡೆಕ್ಸ್ ಮಿಷನ್ ಎರಡನೇ ಬಾರಿ ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜೋಡಣೆ ಯಶಸ್ವಿ

Photo Credit: Special Arrangement \ thehindu.com
ಹೊಸದಿಲ್ಲಿ : ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳನ್ನು ಜೋಡಿಸುವ ‘ಸ್ಪೇಸ್ ಡಾಕಿಂಗ್ ಎಕ್ಸಪರಿಮೆಂಟ್’ (ಸ್ಪೇಡೆಕ್ಸ್) ಕಾರ್ಯಾಚರಣೆಯಲ್ಲಿ ಇಸ್ರೋ ಎರಡನೇ ಬಾರಿಯೂ ಯಶಸ್ವಿಯಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸೋಮವಾರ ತಿಳಿಸಿದ್ದಾರೆ.
ಉಪಗ್ರಹಗಳನ್ನು ಜೋಡಿಸುವ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಈ ಹಿಂದೆ ಮಾಹಿತಿ ನೀಡಿದಂತೆ ಪಿಎಸ್ಎಲ್ವಿ-ಸಿ 60/ಸ್ಪೇಡೆಕ್ಸ್ ಯೋಜನೆಯನ್ನು 2024 ಡಿಸೆಂಬರ್ 30ರಂದು ಯಶಸ್ವಿಯಾಗಿ ಆರಂಭಿಸಲಾಗಿತ್ತು. ಅನಂತರ ಉಪಗ್ರಹಗಳನ್ನು ಮೊದಲ ಬಾರಿಗೆ 2026 ಜನವರಿ 16ರಂದು ಬೆಳಗ್ಗೆ 6.20ಕ್ಕೆ ಮೊದಲ ಬಾರಿಗೆ ಯಶಸ್ವಿಯಾಗಿ ಜೋಡಿಸಲಾಗಿತ್ತು. ಅನಂತರ 2025 ಮಾರ್ಚ್ 13ರಂದು ಬೆಳಗ್ಗೆ 9.20ರಂದು ಬೇರ್ಪಡಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಮುಂದಿನ ಎರಡು ವಾರಗಳಲ್ಲಿ ಇನ್ನಷ್ಟು ಪ್ರಯೋಗ ನಡೆಸಲು ಯೋಜಿಸಲಾಗಿದೆ ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
Next Story