‘ರಾಜಕೀಯದೊಂದಿಗೆ ಕ್ರೀಡೆಗಳನ್ನು ಬೆರೆಸಬಾರದು’: ಏಕದಿನ ವಿಶ್ವಕಪ್ ನಲ್ಲಿ ಭಾಗವಹಿಸುವಿಕೆಯನ್ನು ದೃಢಪಡಿಸಿದ ಪಾಕಿಸ್ತಾನ ಕ್ರಿಕೆಟ್ ತಂಡ
Photo: GETTY/ICC
ಕರಾಚಿ: 2023ರ ಏಕದಿನ ವಿಶ್ವಕಪ್ ಗಾಗಿ ದೇಶದ ಹಿರಿಯ ಪುರುಷರ ತಂಡ ಭಾರತಕ್ಕೆ ಪ್ರಯಾಣಿಸಲು ಪಾಕಿಸ್ತಾನ ಸರಕಾರವು ರವಿವಾರ ಅನುಮತಿ ನೀಡಿದೆ. ಇದರೊಂದಿಗೆ ವಿಶ್ವಕಪ್ ನಲ್ಲಿ ಭಾಗವಹಿಸುವ ಕುರಿತಾಗಿ ಹಲವು ತಿಂಗಳುಗಳಿಂದ ಇದ್ದ ಅನಿಶ್ಚಿತತೆ ಅಂತ್ಯವಾಗಿದೆ.
ರಾಜಕೀಯದೊಂದಿಗೆ ಕ್ರೀಡೆಗಳನ್ನು ಬೆರೆಸಬಾರದು ಎಂದು ಪಾಕಿಸ್ತಾನ ಪದೇ ಪದೇ ಹೇಳುತ್ತಾ ಬಂದಿದೆ. ಹೀಗಾಗಿ ಮುಂಬರುವ ವಿಶ್ವಕಪ್ ನಲ್ಲಿ ಸ್ಪರ್ಧಿಸಲು ತನ್ನ ತಂಡವನ್ನು ಭಾರತಕ್ಕೆ ಕಳುಹಿಸಿಕೊಡಲು ನಿರ್ಧರಿಸಿದೆ ಎಂದು ವಿದೇಶಿ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ತನ್ನ ತಂಡದ ಭದ್ರತೆಯ ಕುರಿತಾಗಿ ಪಾಕಿಸ್ತಾನವು ತೀವ್ರ ಕಳವಳ ಹೊಂದಿದೆ. ಈ ವಿಚಾರವನ್ನು ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ICC) ಹಾಗೂ ಭಾರತದ ಅಧಿಕಾರಿಗಳಿಗೆ ತಿಳಿಸಿದೆ. ಭಾರತದ ಪ್ರವಾಸದ ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸಂಪೂರ್ಣ ಸುರಕ್ಷತೆ ಹಾಗೂ ಭದ್ರತೆಯನ್ನು ಖಚಿತಪಡಿಸುವ ಕುರಿತು ನಾವು ನಿರೀಕ್ಷೆ ಮಾಡುತ್ತೇವೆ ಎಂದು ಸಚಿವಾಲಯ ತಿಳಿಸಿದೆ.
Next Story