ಶ್ರೀಲಂಕಾ ನೌಕಾಪಡೆಯಿಂದ ಬಂಧಿತ 17 ಮೀನುಗಾರರು ಭಾರತಕ್ಕೆ ವಾಪಾಸ್
PC : Credit: X/@IndiainSL
ಕೊಲಂಬೊ : ಶ್ರೀಲಂಕಾ ನೌಕಾಪಡೆಯಿಂದ ಬಂಧಿತರಾಗಿದ್ದ 17 ಭಾರತೀಯ ಮೀನುಗಾರರನ್ನು ಸ್ವದೇಶಕ್ಕೆ ಕಳುಹಿಸಲಾಗಿದೆ ಎಂದು ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರಿ ಕಚೇರಿ, 17 ಭಾರತೀಯ ಮೀನುಗಾರರನ್ನು ಯಶಸ್ವಿಯಾಗಿ ಸ್ವದೇಶಕ್ಕೆ ಕಳುಹಿಸಲಾಗಿದೆ ಮತ್ತು ಅವರು ಭಾರತದ ತಮಿಳುನಾಡಿಗೆ ವಾಪಾಸ್ಸಾಗಲಿದ್ದಾರೆ ಎಂದು ತಿಳಿಸಿದೆ.
ಮೀನುಗಾರರು ತಮ್ಮ ಗಡಿ ದಾಟಿ ಇನ್ನೊಂದು ದೇಶದ ಜಲಪ್ರದೇಶದೊಳಗೆ ಪ್ರವೇಶಿಸಿದಾಗ ಅವರನ್ನು ಬಂಧಿಸಲಾಗುತ್ತದೆ. ಶ್ರೀಲಂಕಾ ನೌಕಾಪಡೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಈ ವರ್ಷ ಶ್ರೀಲಂಕಾ ನೌಕಾಪಡೆ 413 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿದೆ.
ಮೀನುಗಾರರ ಸಮಸ್ಯೆಯು ಉಭಯ ದೇಶಗಳ ನಡುವಿನ ಬಹುಕಾಲದ ಸಮಸ್ಯೆಯಾಗಿದೆ. ಶ್ರೀಲಂಕಾದ ಪ್ರಾದೇಶಿಕ ಜಲ ಪ್ರದೇಶವನ್ನು ಪ್ರವೇಶಿಸಿದ್ದಾರೆಂದು ಲಂಕಾ ನೌಕಾಪಡೆಯ ಸಿಬ್ಬಂದಿ ಭಾರತೀಯ ಮೀನುಗಾರರ ಬಂಧನ, ಫೈರಿಂಗ್, ದೋಣಿಗಳನ್ನು ವಶಪಡಿಸಿಕೊಂಡಂತಹ ಹಲವು ಉದಾಹರಣೆಗಳಿದೆ. ಇದೇ ರೀತಿಯ ಘಟನೆಗಳು ಭಾರತೀಯ ಜಲ ಪ್ರದೇಶಗಳಲ್ಲೂ ಸಂಭವಿಸಿದೆ.