ಗ್ರಾಮ ಸ್ವಯಂಸೇವಕನ ಹತ್ಯೆ ಪ್ರತಿಭಟಿಸಿ ಮಣಿಪುರದಲ್ಲಿ ಮುಷ್ಕರ
ಸಾಂದರ್ಭಿಕ ಚಿತ್ರ
ಇಂಫಾಲ: ಇತ್ತೀಚೆಗೆ ನಡೆದ ಗ್ರಾಮ ಸ್ವಯಂಸೇವಕರೊಬ್ಬರ ಹತ್ಯೆಯನ್ನು ಪ್ರತಿಭಟಿಸಿ ಮಣಿಪುರದ ಇಂಫಾಲ ಕಣಿವೆಯಲ್ಲಿ ಶನಿವಾರ 48 ಗಂಟೆಗಳ ಮುಷ್ಕರ ಆರಂಭಗೊಂಡಿದೆ. ಕಣಿವೆಯಾದ್ಯಂತ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.
ನಾಗರಿಕ ಸಮಾಜದ ನಾಯಕರನ್ನು ಒಳಗೊಂಡ ಜಂಟಿ ಕ್ರಿಯಾ ಸಮಿತಿ (ಜೆಎಸಿ)ಯು ಮುಷ್ಕರಕ್ಕೆ ಕರೆ ನೀಡಿದೆ. ಮುಷ್ಕರ ಮುಂಜಾನೆ 5 ಗಂಟೆಗೆ ಆರಂಭಗೊಂಡಿದೆ.
ಮಣಿಪುರದ ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಜನವರಿ 17ರಂದು ಸಂಘರ್ಷನಿರತ ಎರಡು ಸಮುದಾಯಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ 23 ವರ್ಷದ ಗ್ರಾಮ ಸ್ವಯಂಸೇವಕ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಇಂಫಾಲ ಕಣಿವೆಯಲ್ಲಿ ಮಾರುಕಟ್ಟೆಗಳು ಮತ್ತು ಇತರ ವ್ಯಾಪಾರ ಮಳಿಗೆಗಳು ಮುಚ್ಚಿದ್ದವು. ಸಾರ್ವಜನಿಕ ಸಾರಿಗೆಯ ಬಸ್ ಗಳು ರಸ್ತೆಗೆ ಇಳಿಯಲಿಲ್ಲ. ಕಚೇರಿಯಲ್ಲಿ ಹಾಜರಾತಿಯೂ ಕಡಿಮೆಯಾಗಿತ್ತು.
Next Story