‘ನ್ಯೂಸ್ ಕ್ಲಿಕ್’ ಸಂಸ್ಥಾಪಕ ಪುರಕಾಯಸ್ಥ ಆರೋಗ್ಯ ಸ್ಥಿತಿ ಕುರಿತು 2 ವಾರಗಳಲ್ಲಿ ವರದಿ ಸಲ್ಲಿಸಿ : ಏಮ್ಸ್ ಗೆ ಸುಪ್ರೀಂ ಕೋರ್ಟ್ ಸೂಚನೆ
ಪ್ರಬೀರ್ ಪುರಕಾಯಸ್ಥ | Photo: PTI
ಹೊಸದಿಲ್ಲಿ : ಸುದ್ದಿ ವೆಬ್ ಸೈಟ್ ‘ನ್ಯೂಸ್ ಕ್ಲಿಕ್’ನ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಅವರ ಆರೋಗ್ಯ ತಪಾಸಣೆ ನಡೆಸಲು ಹಾಗೂ ಅವರ ಆರೋಗ್ಯ ಸ್ಥಿತಿ ಕುರಿತು ಎರಡು ವಾರಗಳಲ್ಲಿ ವರದಿ ಸಲ್ಲಿಸಲು ವೈದ್ಯಕೀಯ ಮಂಡಳಿ ರೂಪಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಏಮ್ಸ್ ಗೆ ನಿರ್ದೇಶಿಸಿದೆ.
ಪುರಕಾಯಸ್ಥ ಅವರ ಕಾರಾಗೃಹದ ದಾಖಲೆಗಳು ಹಾಗೂ ಸಂಪೂರ್ಣ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸುವಂತೆ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಹಾಗೂ ಸಂದೀಪ್ ಮೆಹ್ತಾ ಅವರನ್ನು ಒಳಗೊಂಡ ಪೀಠ ಏಮ್ಸ್ ಗೆ ಸೂಚಿಸಿದೆ.
74ರ ಹರೆಯದ ಪುರಕಾಯಸ್ಥ ಅವರು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ತಿಹಾರ್ ಕಾರಾಗೃಹದಲ್ಲಿ ಇದ್ದಾರೆ.
‘ನ್ಯೂಸ್ ಕ್ಲಿಕ್’ಗೆ ಸಂಬಂಧಿಸಿದ ಹಲವು ಪತ್ರಕರ್ತರ ನಿವಾಸಗಳಿಗೆ ದಿಲ್ಲಿ ಪೊಲೀಸರು ಅಕ್ಟೋಬರ್ 3ರಂದು ದಾಳಿ ನಡೆಸಿದ್ದರು. ಅಲ್ಲದೆ, ಪುರಾಕಾಯಸ್ಥ ಹಾಗೂ ‘ನ್ಯೂಸ್ ಕ್ಲಿಕ್’ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿಯನ್ನು ಬಂಧಿಸಿದ್ದರು.
Next Story