ನ್ಯಾಯಕ್ಕಾಗಿ ಹೋರಾಟಕ್ಕೆ ಬೆಂಬಲ : ಸಾಕ್ಷಿ ಮಲಿಕ್, ಬಜರಂಗ್ ಪುನಿಯಾಗೆ ಪ್ರಿಯಾಂಕಾ ಗಾಂಧಿ ಭರವಸೆ
ಪ್ರಿಯಾಂಕಾ ಗಾಂಧಿ ವಾದ್ರಾ
ಹೊಸದಿಲ್ಲಿ: ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟವನ್ನು ಎಲ್ಲ ರೀತಿಯಲ್ಲಿಯೂ ಬೆಂಬಲಿಸುವುದಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶುಕ್ರವಾರ ತನ್ನನ್ನು ಭೇಟಿಯಾದ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರಿಗೆ ಭರವಸೆ ನೀಡಿದರು.
ವಿಶ್ವಾದ್ಯಂತ ದೇಶಕ್ಕೆ ಕೀರ್ತಿಯನ್ನು ತಂದಿರುವ ಮಹಿಳಾ ಕುಸ್ತಿಪಟುಗಳು ಬಿಜೆಪಿ ಸಂಸದರೋರ್ವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದರು. ಆದರೆ ಬಿಜೆಪಿ ಸರಕಾರವು ಅವರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಬದಲಾಗಿ ಸಂತ್ರಸ್ತರಿಗೆ ವಿವಿಧ ರೀತಿಗಳಲ್ಲಿ ಚಿತ್ರಹಿಂಸೆಯನ್ನು ನೀಡಲಾಗಿದೆ. ಬಿಜೆಪಿಯು ಈಗಲೂ ಆರೋಪಿಯನ್ನು ಬೆಂಬಲಿಸುತ್ತಿದೆ ಮತ್ತು ಎಲ್ಲ ರೀತಿಗಳಲ್ಲಿಯೂ ಅವರನ್ನು ಪುರಸ್ಕರಿಸುತ್ತಿದೆ. ಈ ದೇಶದ ಮಹಿಳೆಯರು ಈ ದೌರ್ಜನ್ಯಗಳನ್ನು ನೋಡುತ್ತಿದ್ದಾರೆ ಎಂದು ಪ್ರಿಯಾಂಕಾ ಹೇಳಿದರು.
Next Story