ಸುಪ್ರೀಂ ಕೋರ್ಟ್ ಕೊಲಿಜಿಯಮ್ | ನೂತನ ಸದಸ್ಯರಾಗಿ ನ್ಯಾ.ಎ.ಎಸ್.ಓಕಾ
ನ್ಯಾ.ಎ.ಎಸ್.ಓಕಾ | PC : X
ಹೊಸದಿಲ್ಲಿ : ಐವರು ಸದಸ್ಯರ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಈಗ ನೂತನ ಸಿಜೆಐ ಸಂಜೀವ ಖನ್ನಾ ಅವರ ನೇತೃತ್ವವನ್ನು ಹೊಂದಿದ್ದು, ನ್ಯಾ.ಎ.ಎಸ್.ಓಕಾ ಅವರು ನೂತನ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ.
ಮಾಜಿ ಸಿಜೆಐ ಡಿ.ವೈ.ಚಂದ್ರಚೂಡ್ ಅವರು ನ.10ರಂದು ನಿವೃತ್ತರಾಗಿದ್ದಾರೆ. ಹೀಗಾಗಿ ಕೊಲಿಜಿಯಂ ಅನ್ನು ಪುನಾರಚಿಸಲಾಗಿದೆ.
ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ಶಿಫಾರಸು ಮಾಡುವ ಜವಾಬ್ದಾರಿಯನ್ನು ಹೊಂದಿರುವ ಕೊಲಿಜಿಯಂ ಮುಖ್ಯ ನ್ಯಾಯಾಧೀಶ ಖನ್ನಾ ಅವರೊಂದಿಗೆ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಸೂರ್ಯಕಾಂತ, ಹೃಷಿಕೇಶ ರಾಯ್ ಮತ್ತು ಎ.ಎಸ್.ಓಕಾ ಅವರನ್ನು ಒಳಗೊಂಡಿದೆ.
ಇತ್ತೀಚಿನ ಪುನರ್ ರಚನೆಯಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ನೇಮಕದ ಜವಾಬ್ದಾರಿ ಹೊತ್ತಿರುವ ಮೂವರು ಸದಸ್ಯರ ಕೊಲಿಜಿಯಂ ಅನ್ನೂ ರಚಿಸಲಾಗಿದ್ದು, ಸಿಜೆಐ ಖನ್ನಾ ಹಾಗೂ ನ್ಯಾಯಮೂರ್ತಿಗಳಾದ ಗವಾಯಿ ಮತ್ತು ಸೂರ್ಯಕಾಂತ ಅವರನ್ನೊಳಗೊಂಡಿದೆ.
Next Story