ಸುಪ್ರೀಂ ಕೋರ್ಟ್ ನಿಂದ ಗಡುವು ವಿಸ್ತರಣೆ: ಶಾಸಕರ ಅನರ್ಹತೆ ಅರ್ಜಿಗಳನ್ನು ಜ.10ರೊಳಗೆ ನಿರ್ಧರಿಸುವಂತೆ ಮಹಾರಾಷ್ಟ್ರ ಸ್ಪೀಕರ್ ಗೆ ಸೂಚನೆ
ರಾಹುಲ್ ನಾರ್ವೇಕರ್ | Photo: PTI
ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯವು ಶಿವಸೇನೆಯ ಎದುರಾಳಿ ಬಣಗಳು ಪರಸ್ಪರರ ಶಾಸಕರ ಅರ್ನಹತೆಯನ್ನು ಕೋರಿ ಸಲ್ಲಿಸಿರುವ ಅರ್ಜಿಗಳನ್ನು ನಿರ್ಧರಿಸಲು ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಶುಕ್ರವಾರ ಇನ್ನೂ ಹತ್ತು ದಿನಗಳ ಸಮಯಾವಕಾಶವನ್ನು ನೀಡಿದೆ.
ಜ.10ರವರೆಗೆ ಸಮಯಾವಕಾಶವನ್ನು ವಿಸ್ತರಿಸಿರುವ ಸರ್ವೋಚ್ಚ ನ್ಯಾಯಾಲಯವು ಡಿ.31ರೊಳಗೆ ಅನರ್ಹತೆ ಅರ್ಜಿಗಳನ್ನು ನಿರ್ಧರಿಸುವಂತೆ ಸ್ಪೀಕರ್ ಗೆ ಈ ಹಿಂದೆ ಸೂಚಿಸಿತ್ತು.
ಕೆಲವು ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳನ್ನು ತ್ವರಿತವಾಗಿ ನಿರ್ಧರಿಸುವಂತೆ ಸ್ಪೀಕರ್ ಗೆ ನಿರ್ದೇಶನವನ್ನು ಕೋರಿ ಶಿವಸೇನೆಯ ಉದ್ಧವ ಠಾಕ್ರೆ ಬಣ ಮತ್ತು ಎನ್ಸಿಪಿಯ ಶರದ್ ಪವಾರ್ ಬಣ ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.
Next Story