ರಾಘವ್ ಚಡ್ಡಾ ಅಮಾನತು ಪ್ರಶ್ನಿಸಿ ಅರ್ಜಿ: ರಾಜ್ಯಸಭಾ ಕಾರ್ಯದರ್ಶಿ ಗೆ ಸುಪ್ರೀಂ ನೊಟೀಸ್
ರಾಘವ್ ಚಡ್ಡಾ | Photo: PTI
ಹೊಸದಿಲ್ಲಿ: ರಾಜ್ಯಸಭೆಯಿಂದ ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಅ. 30ರಂದು ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ. ಈ ಸಂಬಂಧ ಸುಪ್ರೀಂ ಕೋರ್ಟ್, ರಾಜ್ಯಸಭಾ ಕಾರ್ಯಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಈ ಪ್ರಕರಣ ಇತ್ಯರ್ಥಪಡಿಸಲು ಅಟಾರ್ನಿ ಜನರಲ್ ಅವರ ಸಹಾಯ ಕೋರಿದೆ.
ಸಂಸತ್ ನಿಯಮ ಉಲ್ಲಂಘನೆ, ಕಲಾಪದ ಸಂದರ್ಭ ದುರ್ನಡತೆಗಾಗಿ ಆಮ್ ಆದ್ಮ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ ಅವರನ್ನು ಆಗಸ್ಟ್ ನಲ್ಲಿ ಮುಂಗಾರು ಅಧಿವೇಶನದ ಕೊನೆಯ ದಿನ ರಾಜ್ಯಸಭಾ ಕಲಾಪದಿಂದ ಅಮಾನತು ಮಾಡಲಾಗಿತ್ತು.
ಅ.10 ರಂದು ಚಡ್ಡಾ ಸದನದಿಂದ ತಮ್ಮನ್ನು ಅಮಾನತು ಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ನಿಗದಿತ ಅಧಿವೇಶನ ಮುಗಿದ ನಂತರವೂ ಸದಸ್ಯರ ಅಮಾನತು ನಿರ್ಧಾರವನ್ನು ಅನಿರ್ಧಿಷ್ಟಾವಧಿಗೆ ವಿಸ್ತರಿಸಲು ಅವಕಾಶವಿಲ್ಲ ಎಂದೂ ಭ ವಕೀಲರು ಪೀಠದ ಗಮನಕ್ಕೆ ತಂದರು.