ಟೆಕ್ಕಿ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ʼಜೀವನಾಂಶ ಮೊತ್ತʼ ನಿರ್ಧರಿಸುವಾಗ ಪಾಲಿಸಬೇಕಾದ ಮಾನದಂಡಗಳನ್ನು ನಿಗದಿ ಪಡಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ: ಪತ್ನಿಯ ಕಿರುಕುಳದಿಂದ ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಚರ್ಚೆ ನಡೆಯುತ್ತಿರುವ ಮಧ್ಯೆ, ವಿಚ್ಛೇದನ ಪ್ರಕರಣಗಳಲ್ಲಿ ಜೀವನಾಂಶದ ಮೊತ್ತವನ್ನು ನಿರ್ಧರಿಸುವಾಗ ಪಾಲಿಸಲು ಸುಪ್ರೀಂಕೋರ್ಟ್ ಕೆಲ ಷರತ್ತುಗಳನ್ನು ನಿಗದಿಪಡಿಸಿದೆ.
ಪ್ರವೀಣ್ ಕುಮಾರ್ ಜೈನ್ ಮತ್ತು ಅಂಜು ಜೈನ್ ದಂಪತಿಯ ವಿಚ್ಛೇದನ ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಪ್ರಸನ್ನ ವಿ ವರಾಳೆ ಅವರ ಪೀಠವು ಪ್ರವೀಣ್ ಕುಮಾರ್ ಜೈನ್ ಅವರಿಗೆ ಪತ್ನಿಗೆ ಜೀವನಾಂಶವಾಗಿ 5 ಕೋಟಿ ರೂ.ನೀಡುವಂತೆ ಆದೇಶವನ್ನು ನೀಡಿದೆ.
ವಿಚ್ಛೇದನ ಪ್ರಕರಣಗಳಲ್ಲಿ ಜೀವನಾಂಶ ಮೊತ್ತ ನಿರ್ಧರಿಸುವಾಗ ಪಾಲಿಸಲು ಎಂಟು ಅಂಶಗಳ ಸೂತ್ರಗಳನ್ನು ಪಾಲಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದ್ದು, ಎಲ್ಲಾ ನ್ಯಾಯಾಲಯಗಳು ಈ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸಲಹೆಯನ್ನು ನೀಡಿದೆ.
► ಪತಿ ಮತ್ತು ಪತ್ನಿಯ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ
► ಭವಿಷ್ಯದಲ್ಲಿ ಪತ್ನಿ ಮತ್ತು ಮಕ್ಕಳ ಮೂಲಭೂತ ಅಗತ್ಯಗಳು
► ಪತಿ-ಪತ್ನಿಯ ಅರ್ಹತೆ ಮತ್ತು ಉದ್ಯೋಗ
► ಆದಾಯ ಮತ್ತು ಆಸ್ತಿಗಳ ಮೂಲಗಳು
► ಅತ್ತೆಯ ಮನೆಯಲ್ಲಿ ವಾಸಿಸುತ್ತಿರುವಾಗ ಪತ್ನಿಯ ಜೀವನ ಮಟ್ಟ
► ಕುಟುಂಬವನ್ನು ನೋಡಿಕೊಳ್ಳಲು ಪತ್ನಿ ತನ್ನ ಕೆಲಸವನ್ನು ತೊರೆದಿದ್ದಾರ?
► ಕೆಲಸಕ್ಕೆ ತೆರಳುತ್ತಿಲ್ಲ ಎಂದಾದರೆ ಪತ್ನಿಗೆ ಕಾನೂನು ಹೋರಾಟಕ್ಕೆ ಸಮಂಜಸವಾದ ಮೊತ್ತ
► ಪತಿಯ ಆರ್ಥಿಕ ಸ್ಥಿತಿ ಹೇಗಿದೆ? ಅವನ ಗಳಿಕೆ ಮತ್ತು ಇತರ ಜವಾಬ್ದಾರಿಗಳು ಏನೇನು?