ಫ್ರೊ. ಜಿ.ಎನ್. ಸಾಯಿಬಾಬಾ ಖುಲಾಸೆಗೆ ತಡೆ ಕೋರಿದ್ದ ಮಹಾರಾಷ್ಟ್ರ ಸರಕಾರದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ದಿಲ್ಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್.ಸಾಯಿಬಾಬಾ ಹಾಗೂ ಇನ್ನಿತರ ಐದು ಮಂದಿಯನ್ನು ಮಾರ್ಚ್ 5ರಂದು ಖುಲಾಸೆಗೊಳಿಸಿದ್ದ ಬಾಂಬೆ ಹೈಕೋರ್ಟ್ ಆದೇಶಕ್ಕೆ ತಡೆ ನೀಡಬೇಕು ಎಂದು ಮಹಾರಾಷ್ಟ್ರ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅವರಿಗೆ ಮಾವೋವಾದಿಗಳೊಂದಿಗೆ ಸಂಪರ್ಕವಿದೆ ಎಂದು ಆರೋಪಿಸಿ ಅವರನ್ನು ಯುಎಪಿಎ ಕಾಯ್ದೆಯಡಿ ಸೆರೆವಾಸದಲ್ಲಿಡಲಾಗಿತ್ತು.
ಸಾಯಿಬಾಬಾ ಮತ್ತಿತರರನ್ನು ಖುಲಾಸೆಗೊಳಿಸಲು ಮೇಲ್ನೋಟದ ಸಾಕ್ಷ್ಯಾಧಾರಗಳು ಸೂಕ್ತವಾಗಿವೆ ಎಂಬುದನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ವಾರ, ಬಾಂಬೆ ಹೈಕೋರ್ಟ್ ನ ನಾಗಪುರ ನ್ಯಾಯಪೀಠವು ಸಾಯಿಬಾಬಾ ಹಾಗೂ ಇನ್ನಿತರ ಐದು ಮಂದಿಯನ್ನು ಖುಲಾಸೆಗೊಳಿಸಿತ್ತಲ್ಲದೆ, ತಮ್ಮನ್ನು ದೋಷಿ ಎಂದು ತೀರ್ಪು ನೀಡಿದ 2017ರ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲೂ ಅವರಿಗೆ ಅವಕಾಶ ಒದಗಿಸಿತ್ತು.
Next Story