ಸೆಬಿ ಅಧ್ಯಕ್ಷೆ ಮಾಧವಿ ಬುಚ್ ವಿರುದ್ಧ ಹಿಂಡನ್ ಬರ್ಗ್ ಆರೋಪಗಳ ಬಗ್ಗೆ ಸುಪ್ರೀಂಕೋರ್ಟ್ ಗಮನಹರಿಸಲಿ : ಆಪ್ ಆಗ್ರಹ
ಹೊಸದಿಲ್ಲಿ : ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ವಿರುದ್ಧ ಅಮೆರಿಕದ ಶಾರ್ಟ್‌ಸೆಲ್ಲರ್ ಕಂಪೆನಿ ಹಿಂಡನ್‌ಬರ್ಗ್ ಮಾಡಿರುವ ಆರೋಪಗಳ ಬಗ್ಗೆ ಸುಪ್ರೀಂಕೋರ್ಟ್ ಗಮನಹರಿಸಬೇಕೆಂದು ಆಮ್ ಆದ್ಮಿ ಪಕ್ಷ (ಆಪ್)ವು ರವಿವಾರ ಆಗ್ರಹಿಸಿದೆ.
ಮಾಧವಿ ಬುಚ್ ಅವರಿಗೆ ಅದಾನಿ ಉದ್ಯಮ ಸಮೂಹದ ಜೊತೆ ನಂಟಿರುವ ವಿದೇಶಿ ನಿಧಿಗಳ ಜೊತೆ ಪಾಲುದಾರಿಕೆ ಇರುವುದರಿಂದಲೇ ಸೆಬಿಯು, ಆದಾನಿ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರಾಕರಿಸಿದೆಯೆಂದು ಹಿಂಡನ್‌ಬರ್ಗ್ ರಿಸರ್ಚ್ ಶನಿವಾರ ಪ್ರಕಟಿಸಿದ ವರದಿಯು ತಿಳಿಸಿತ್ತು.
ಹೊಸದಿಲ್ಲಿಯಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಲ್ಲಿ ಆಪ್‌ನ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮಾತನಾಡಿ, ತನ್ನ ಕಂಪೆನಿಗಳ ಶೇರುಗಳ ಮೌಲ್ಯವನ್ನು ಕೃತಕವಾಗಿ ಹೆಚ್ಚಿಸಿದ ಆರೋಪಕ್ಕೆ ಸಂಬಂಧಿಸಿ ಆದಾನಿ ಗ್ರೂಪ್ ವಿರುದ್ಧ ದಿಕ್ಕಿಲ್ಲದೆ ತನಿಖೆ ನಡೆಯುತ್ತಿದೆಯೆಂದು ಸೆಬಿ , ಸುಪ್ರಿಂಕೋರ್ಟ್‌ನಿಯೋಜಿತ ಸಮಿತಿಗೆ ತಿಳಿಸಿದ್ದನ್ನು ನೆನಪಿಸಿಕೊಂಡರು.
Next Story