ವಿಶೇಷ ಲೋಕ ಅದಾಲತ್ ಗಳನ್ನು ಆರಂಭಿಸಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಇದೇ ಮೊದಲ ಬಾರಿಗೆ ಸರ್ವೋಚ್ಚ ನ್ಯಾಯಾಲಯದ ಮೊದಲ ಏಳು ನ್ಯಾಯಪೀಠಗಳು ವಿವಾದಗಳನ್ನು ರಾಜಿಯುತವಾಗಿ ಬಗೆಹರಿಸುವ ಉದ್ದೇಶದಿಂದ ಸೋಮವಾರದಿಂದ ವಿಶೇಷ ಲೋಕ ಅದಾಲತ್ ಆರಂಭಿಸಿದ್ದು,ಆ.3ರವರೆಗೆ ನಡೆಯಲಿದೆ.
ಸರ್ವೋಚ್ಚ ನ್ಯಾಯಾಲಯವು ತನ್ನ 75ನೇ ವರ್ಷದ ಸಂಭ್ರಮಾಚರಣೆಯಲ್ಲಿದ್ದು ವಿಚಾರಣೆಗೆ ಬಾಕಿಯಿರುವ ಅರ್ಹ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲು ಲೋಕ ಅದಾಲತ್ ಗೆ ಚಾಲನೆ ನೀಡಲಾಗಿದೆ. ವರದಿಗಾರಿಕೆಗಾಗಿ ಮಾಧ್ಯಮಗಳ ಕ್ಯಾಮೆರಾಗಳಿಗೆ ನ್ಯಾಯಾಲಯ ಕೊಠಡಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸೋಮವಾರ ನ್ಯಾಯಾಲಯದ ಕಲಾಪಗಳ ಆರಂಭಕ್ಕೆ ಮುನ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು,ಇಂದಿನಿಂದ ಶುಕ್ರವಾರದವರೆಗೆ ಲೋಕ ಅದಾಲತ್ ನಡೆಸಲಾಗುತ್ತಿದ್ದು,ಮೊದಲ ಏಳು ನ್ಯಾಯಪೀಠಗಳು ವಿಚಾರಣೆಯನ್ನು ನಡೆಸಲಿವೆ. ವಕೀಲರು ಅರ್ಹ ಪ್ರಕರಣಗಳನ್ನು ಲೋಕ ಅದಾಲತ್ಗೆ ತರಬಹುದು ಎಂದು ತಿಳಿಸಿದರು.
Next Story