ರೈಲಿನಲ್ಲಿ ಪ್ರಯಾಣಿಕನಿಗೆ ಥಳಿಸಿದ ಟಿಕೆಟ್ ತಪಾಸಕನ ಅಮಾನತು
ಲಕ್ನೋ: ಬರೌನಿ-ಲಕ್ನೋ ಎಕ್ಸ್ ಪ್ರೆಸ್ ರೈಲಿನಲ್ಲಿ ವ್ಯಕ್ತಿಯೊಬ್ಬನಿಗೆ ಭಾರತೀಯ ರೈಲ್ವೇಯ ಉಪ ಮುಖ್ಯ ಟಿಕೆಟ್ ತಪಾಸಕರೊಬ್ಬರು ಥಳಿಸುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಅವರನ್ನು ಅಮಾನತುಗೊಳಿಸಲಾಗಿದೆ.
ಈ ಘಟನೆಯು ಗುರುವಾರ ಉತ್ತರಪ್ರದೇಶದ ಗೊಂಡ ಮತ್ತು ಬಾರಾಬಂಕಿ ರೈಲು ನಿಲ್ದಾಣಗಳ ನಡುವೆ ಸಂಭವಿಸಿದೆ.
ಟಿಕೆಟ್ ತಪಾಸಕನನ್ನು ಅಮಾನತುಗೊಳಿಸಿರುವುದನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಖಚಿತ ಪಡಿಸಿದ್ದಾರೆ. ‘‘ಇಂಥ ದುರ್ವರ್ತನೆಗಳನ್ನು ನಾವು ಸಹಿಸುವುದಿಲ್ಲ’’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ಸಂದೇಶವೊಂದರಲ್ಲಿ ವೈಷ್ಣವ್ ಹೇಳಿದ್ದಾರೆ.
ಅಮಾನತಾಗಿರುವ ಟಿಕೆಟ್ ತಪಾಸಕನನ್ನು ಲಕ್ನೋ ಜಂಕ್ಷನ್ ರೈಲು ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಪ್ರಕಾಶ್ ಎಂಬುದಾಗಿ ಗುರುತಿಸಲಾಗಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.
ಟಿಕೆಟ್ ತಪಾಸಕನು ಪ್ರಯಾಣಿಕನಿಗೆ ಹೊಡೆಯುವುದನ್ನು ಇತರ ಪ್ರಯಾಣಿಕರು ಆಕ್ಷೇಪಿಸುವುದನ್ನು 30 ಸೆಕೆಂಡ್ ಗಳ ವೀಡಿಯೊ ತೋರಿಸುತ್ತದೆ.
वीडियो आज का है। बरौनी-लखनऊ एक्सप्रेस (15203) में टीटी इस तरह से पिटाई कर रहा।
— Rajesh Sahu (@askrajeshsahu) January 18, 2024
रेल मंत्री @AshwiniVaishnaw जी, बताएं कि क्या इन लोगों को ऐसे पीटने की आजादी है? क्या टीटी के नाम पर गुंडे रखे गए हैं? ये सिस्टम में क्यों है?
वीडियो साफ है, कार्रवाई कीजिए। और हां, जनता को… pic.twitter.com/Cl5XYxl3GC