ಟಿ20 ವಿಶ್ವಕಪ್ | ವೆಸ್ಟ್ಇಂಡೀಸ್ನಲ್ಲಿ ನಡೆದ ಮೊದಲ ಪಂದ್ಯಕ್ಕೆ ಪ್ರೇಕ್ಷಕರ ಕೊರತೆ!
PC : NDTV
ಹೊಸದಿಲ್ಲಿ : ವೆಸ್ಟ್ಇಂಡೀಸ್ ಹಾಗೂ ಪಪುವಾ ನ್ಯೂ ಗಿನಿ ರವಿವಾರ ಮುಖಾಮುಖಿಯಾಗುವ ಮೂಲಕ ಕೆರಿಬಿಯನ್ ನಾಡಿನಲ್ಲಿ ಟಿ20 ವಿಶ್ವಕಪ್ಗೆ ಚಾಲನೆ ಲಭಿಸಿದೆ. ಆದರೆ ಮೊದಲ ಪಂದ್ಯದಲ್ಲಿ ಕ್ರೀಡಾಂಗಣವು ಸಾಕಷ್ಟು ಪ್ರೇಕ್ಷಕರಿಲ್ಲದೆ ಬಿಕೋ ಎನ್ನುತ್ತಿತ್ತು.
ಪ್ರೊವಿಡನ್ಸ್ ಕ್ರೀಡಾಂಗಣದ ಆಸನಗಳು ಭಾಗಶಃ ಭರ್ತಿಯಾಗಿತ್ತು. ಮೈದಾನದ ಹೆಚ್ಚಿನ ಸ್ಟ್ಯಾಂಡ್ಗಳು ಖಾಲಿಯಾಗಿದ್ದವು.
9ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಮೆರಿಕ ಹಾಗೂ ವೆಸ್ಟ್ಇಂಡೀಸ್ನ ಜಂಟಿ ಆತಿಥ್ಯದಲ್ಲಿ ನಡೆಯುತ್ತಿದ್ದು, ಅಮೆರಿಕ ಹಾಗೂ ಕೆನಡಾ ತಂಡಗಳು ಮೊದಲ ಪಂದ್ಯವನ್ನಾಡಿವೆ.
ಕೆರಿಬಿಯನ್ನಲ್ಲಿ ನಡೆದಿದ್ದ ಮೊದಲ ಟಿ20 ವಿಶ್ವಕಪ್ ಪಂದ್ಯದಲ್ಲಿ ಪ್ರೇಕ್ಷಕರ ಕೊರತೆಯು ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದ್ದು, ಇದು ನಿರಾಶಾದಾಯಕ ಎಂದು ಅಭಿಪ್ರಾಯಪಡಲಾಗಿದೆ.
ವೆಸ್ಟ್ಇಂಡೀಸ್ ನಾಯಕ ರೊವ್ಮನ್ ಪೊವೆಲ್ ಗ್ರೂಪ್ ಸಿ ಪಂದ್ಯದಲ್ಲಿ ಪಿಎನ್ಜಿ ವಿರುದ್ಧ ಟಾಸ್ ಜಯಿಸಿ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ.
ಎರಡು ಬಾರಿಯ ಮಾಜಿ ಚಾಂಪಿಯನ್ ವಿಂಡೀಸ್ ತಂಡ ಮೂವರು ಸ್ಪಿನ್ನರ್ಗಳಾದ ರೋಸ್ಟನ್ ಚೇಸ್, ಅಕೀಲ್ ಹುಸೇನ್ ಹಾಗೂ ಗುಡಕೇಶ್ ಮೊಟೀ ಅವರನ್ನು ಅಂತಿಮ-11ರ ಬಳಗಕ್ಕೆ ಸೇರಿಸಿಕೊಂಡಿದೆ.