ತಮಿಳುನಾಡು | ಶಾಲಾ ಬಸ್ಸಿನ ಸೀಟಿಗಾಗಿ ಬಾಲಕರ ಜಗಳ: ಓರ್ವ ಮೃತ್ಯು

ಸಾಂದರ್ಭಿಕ ಚಿತ್ರ | PC : freepik.com
ಚೆನ್ನೈ: ಶಾಲಾ ಬಸ್ಸಿನ ಸೀಟಿನ ಬಗ್ಗೆ ನಡೆದ ಸಣ್ಣ ಜಗಳವೊಂದು ದುರಂತದಲ್ಲಿ ಅಂತ್ಯಗೊಂಡಿದ್ದು, ಸಹಪಾಠಿಯೊಂದಿಗಿನ ಜಗಳದಲ್ಲಿ 14 ವರ್ಷದ ಬಾಲಕ ಗಾಯಗೊಂಡು ಸಾವನ್ನಪ್ಪಿದ್ದಾನೆ.
ಬುಧವಾರ ಈ ಘಟನೆ ನಡೆದಿದ್ದು, 9 ನೇ ತರಗತಿಯ ವಿದ್ಯಾರ್ಥಿಗಳಾದ ಸರವಣನ್ ಮತ್ತು ಕಂದಗುರು ಶಾಲಾ ಬಸ್ಸಿನ ಸೀಟಿಗಾಗಿ ಜಗಳವಾಡಿದ್ದಾರೆ. ವಾಗ್ವಾದ ತೀವ್ರಗೊಂಡು, ಕೈ-ಕೈ ಮಿಲಾಯಿಸಿದ್ದು, ಕಂದಗುರು ನನ್ನು ಸರವಣನ್ ತಳ್ಳಿದ ಪರಿಣಾಮ ಬಿದ್ದು ತಲೆಗೆ ಏಟಾಗಿದೆ ಎಂದು ಹೇಳಲಾಗಿದೆ.
ತಕ್ಷಣವೇ ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ದಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಕಂದಗುರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಘಟನೆಯ ಬಳಿಕ, ಸೇಲಂ ಪೊಲೀಸರು ಸರವಣನ್ ನನ್ನು ವಶಕ್ಕೆ ಪಡೆದಿದ್ದಾರೆ. ಮುಂದಿನ ಕಾನೂನು ಕ್ರಮಗಳಿಗಾಗಿ ಆತನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story