ಕಳ್ಳಭಟ್ಟಿ ಮಾರಾಟ | ಶಿಕ್ಷೆಯ ಪ್ರಮಾಣ ಹೆಚ್ಚಿಸಲು ತಮಿಳುನಾಡು ಸರಕಾರದಿಂದ ಕಾಯ್ದೆಗೆ ತಿದ್ದುಪಡಿ
Photo Credit: PTI
ಚೆನ್ನೈ : ಕಲ್ಲಕುರಿಚಿ ಕಳ್ಳಭಟ್ಟಿ ದುರಂತದ ಕುರಿತು ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆ ತಮಿಳುನಾಡು ಸರಕಾರ ಕಳ್ಳಭಟ್ಟಿ ಉತ್ಪಾದನೆ, ಮಾರಾಟ ಹಾಗೂ ಸಂಸ್ಕರಣೆ ಮಾಡುವವರಿಗೆ ಹೆಚ್ಚು ಕಠಿಣ ಶಿಕ್ಷೆ ನೀಡಲು ಶನಿವಾರ ಕಾನೂನಿಗೆ ತಿದ್ದುಪಡಿ ತಂದಿದೆ.
ತಮಿಳುನಾಡು ನಿಷೇಧ ಕಾಯ್ದೆ, 1937ಕ್ಕೆ ತಿದ್ದುಪಡಿ ತರುವ ಮೂಲಕ ತಮಿಳುನಾಡು ಸರಕಾರ ಶನಿವಾರ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿದೆ. ಈ ತಿದ್ದುಪಡಿ ಕಾಯ್ದೆ ಪ್ರಕಾರ ಕಳ್ಳಭಟ್ಟಿ ಸೇವಿಸಿ ಸಾವನ್ನಪ್ಪಿದ ಪ್ರಕರಣದಲ್ಲಿ ಅಪರಾಧಿಗೆ ಕನಿಷ್ಠ 10 ಲಕ್ಷ ರೂ. ದಂಡದೊಂದಿಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತದೆ.
ಕಳ್ಳಭಟ್ಟಿ ತಯಾರಿಸುವ, ಮಾರಾಟ ಮಾಡುವ ಅಪರಾಧಗಳಿಗೆ ಗರಿಷ್ಠ 10 ವರ್ಷ ಕಾರಾಗೃಹ ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ವರೆಗೆ ದಂಡವನ್ನು ವಿಧಿಸಲಾಗುತ್ತದೆ.
ಕಲ್ಲಕುರಿಚಿ ಕಳ್ಳಭಟ್ಟಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಶುಕ್ರವಾರ 65ಕ್ಕೆ ಏರಿಕೆಯಾಗಿದೆ ಎಂದು ಪತ್ರಿಕೆಯೊಂದರ ವರದಿ ಹೇಳಿದೆ.
Next Story