ಕರ್ನಾಟಕದಿಂದ 24 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಆಗ್ರಹಿಸಿ ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು
ಸುಪ್ರೀಂ | Photo: PTI
ಹೊಸದಿಲ್ಲಿ: ಕಾವೇರಿ ಜಲವಿವಾದಕ್ಕೆ ಸಂಬಂಧಿಸಿ ತಮಿಳುನಾಡು ಸರಕಾರವು ರವಿವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಕರ್ನಾಟಕದ ಜಲಾಶಯಗಳಿಂದ 24 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆಗೊಳಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದೆ.
ಕರ್ನಾಟಕವು ಮುಂದಿನ 15 ದಿನಗಳ ಕಾಲ ಕಬಿನಿ ಹಾಗೂ ಕೆಆರ್ಎಸ್ ಜಲಾಶಯಗಳಿಂದ ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ ನೀರನ್ನು ಬಿಳ್ಳಿ ಗುಂಡ್ಲುನಲ್ಲಿ ಬಿಡುಗಡೆಗೊಳಿಸಬೇಕಾಗಿದೆ. ಆದರೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (ಸಿಡಬ್ಲುಎಂಎ)ವು ಅದನ್ನು 10 ಸಾವಿರಕ್ಕೆ (ದಿನಕ್ಕೆ 0.864 ಕ್ಯೂಸೆಕ್) ಇಳಿಸಿದೆ. ಅದರೆ ಕರ್ನಾಟಕ ಅದಕ್ಕೂ ಬದ್ದವಾಗಿಲ್ಲ ಎಂದು ತಮಿಳುನಾಡು ಸರಕಾರ 2023ರ ಆಗಸ್ಟ್ 11ರಂದು ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.
ಬಿಳಿಗುಂಡುಲುವಿನಲ್ಲಿ ಆಗಸ್ಟ್ 11, 12,13, 14ರಂದು ಕ್ರಮವಾಗಿ 6148, 4852,4453 ಹಾಗೂ ಸುಮಾರು 4 ಸಾವಿರ ಕ್ಯೂಸೆಕ್ ನೀರು ಮಾತ್ರವೇ ಬಿಡುಗಡೆಯಾಗಿದೆ’ ಎಂದು ಅರ್ಜಿಯು ಹೇಳಿದೆ.
ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ ಆದೇಶಕ್ಕನುಗುಣವಾಗಿ ತಮಿಳುನಾಡಿಗೆ ನೀರನ್ನು ಬಿಡುಗೊಳಿಸುವ ಬದ್ದತೆಯನ್ನು ಹೊಂದಿರಬೇಕೆಂದು ತಮಿಳುನಾಡು ಸಕಾರ ಹೇಳಿದೆ.