ತೆರಿಗೆ ವಂಚನೆ ಪ್ರಕರಣ | ದಿಲ್ಲಿಯ ಆಪ್ ಶಾಸಕ ಗುಲಾಬ್ ಯಾದವ್, ಇತರರಿಗೆ ಸೇರಿದ ಸ್ಥಳಗಳಲ್ಲಿ ಐಟಿ ಶೋಧ
ಹೊಸದಿಲ್ಲಿ : ತೆರಿಗೆ ವಂಚನೆಯ ತನಿಖೆಯ ಭಾಗವಾಗಿ ಆದಾಯ ತೆರಿಗೆ ಇಲಾಖೆ ದಿಲ್ಲಿಯಲ್ಲಿ ಶನಿವಾರ ಆಮ್ ಆದ್ಮಿ ಪಕ್ಷದ ಶಾಸಕ ಗುಲಾಬ್ ಸಿಂಗ್ ಯಾದವ್ ಹಾಗೂ ಇತರ ಕೆಲವರಿಗೆ ನಂಟು ಹೊಂದಿದ ಸ್ಥಳಗಳಲ್ಲಿ ಶೋಧ ನಡೆಸಿದೆ.
ಯಾದವ್ (45) ಅವರು ಎರಡು ಬಾರಿ ಶಾಸಕರಾಗಿದ್ದರು ಹಾಗೂ ದಿಲ್ಲಿ ವಿಧಾನಸಭೆಯಲ್ಲಿ ಮಾಟಿಯಾಲವನ್ನು ಪ್ರತಿನಿಧಿಸಿದ್ದರು.
ತೆರಿಗೆ ವಂಚನೆಯ ತನಿಖೆಗೆ ಸಂಬಂಧಿಸಿ ದಿಲ್ಲಿಯ ಗುಮ್ಮನ್ಹೇಡಾ ಗ್ರಾಮದಲ್ಲಿರುವ ಯಾದವ್ ಅವರಿಗೆ ಸೇರಿದ ಸ್ಥಳಗಳಲ್ಲಿ ಹಾಗೂ ಇತರ ಕೆಲವರಿಗೆ ಸೇರಿದ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದೆ.
ತೆರಿಗೆ ಇಲಾಖೆ ಅಧಿಕಾರಿಗಳಿಗೆ ದಿಲ್ಲಿ ಪೊಲೀಸರು ಬೆಂಗಾವಲು ನೀಡಿದರು. ಕೆಲವು ದಾಖಲೆಗಳು ಪತ್ತೆಯಾಗಿವೆ ಹಾಗೂ ನಿರ್ದಿಷ್ಟ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Next Story